1. ಮೂಲಸೌಕರ್ಯ ಮತ್ತು ಸಾರಿಗೆ
* ಬುಲೆಟ್ ರೈಲು: ಒಟ್ಟು 7 ಹೈಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ. ಇದರಲ್ಲಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೈದರಾಬಾದ್-ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ಮಾರ್ಗಗಳು ಸೇರಿವೆ. ಇತರ ಮಾರ್ಗಗಳು: ಮುಂಬೈ-ಪುಣೆ, ಪುಣೆ-ಹೈದರಾಬಾದ್, ದೆಹಲಿ-ವಾರಣಾಸಿ, ವಾರಣಾಸಿ-ಸಿಲಿಗುರಿ.
* ಅರ್ಥ್ ಕಾರಿಡಾರ್: ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಒರಿಸ್ಸಾ ರಾಜ್ಯಗಳಿಗೆ ವಿಶೇಷ ಆರ್ಥಿಕ ಕಾರಿಡಾರ್.
2. ಕೈಗಾರಿಕೆ ಮತ್ತು ತಂತ್ರಜ್ಞಾನ
* ಸೆಮಿಕಂಡಕ್ಟರ್: ಸೆಮಿಕಂಡಕ್ಟರ್ 2.0 ಮಿಷನ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ.
* ಫಾರ್ಮಾ ಕ್ಷೇತ್ರ: ಔಷಧೀಯ ಕ್ಷೇತ್ರದ ಉತ್ತೇಜನಕ್ಕೆ ₹10 ಸಾವಿರ ಕೋಟಿ ಘೋಷಣೆ.
* ಸಣ್ಣ ಕೈಗಾರಿಕೆಗಳು (MSME): ಬೆಳವಣಿಗೆಗಾಗಿ ₹10 ಸಾವಿರ ಕೋಟಿ ಅನುದಾನ.
* ಟೌನ್‌ಶಿಪ್: ಕೈಗಾರಿಕಾ ಹಬ್‌ಗಳಲ್ಲಿ 5 ಹೊಸ ವಿವಿ (UV) ಟೌನ್‌ಶಿಪ್‌ಗಳ ಸ್ಥಾಪನೆ.
3. ಪ್ರವಾಸೋದ್ಯಮ ಮತ್ತು ಆರೋಗ್ಯ
* ಪ್ರವಾಸೋದ್ಯಮ: ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಉತ್ತರ ಭಾರತದ ಪ್ರವಾಸೋದ್ಯಮಕ್ಕೆ ಆದ್ಯತೆ. ವಿದೇಶಿ ಪ್ರವಾಸ ಇನ್ನು ಅಗ್ಗವಾಗಲಿದೆ.
* ಟೂರಿಸ್ಟ್ ಗೈಡ್: 10 ಸಾವಿರ ಪ್ರವಾಸಿ ಮಾರ್ಗದರ್ಶಿಗಳಿಗೆ (Guides) ತರಬೇತಿ ನೀಡುವ ವ್ಯವಸ್ಥೆ.
* ಮೆಡಿಕಲ್ ಟೂರಿಸಂ: 5 ಪ್ರಾದೇಶಿಕ ಮೆಡಿಕಲ್ ಹಬ್‌ಗಳ ಸ್ಥಾಪನೆ.
* WHO ಕಚೇರಿ: ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಕಚೇರಿ ಸ್ಥಾಪನೆ.
* ಆಯುರ್ವೇದ: ಆಯುರ್ವೇದ ಉತ್ಪನ್ನಗಳ ರಫ್ತಿಗೆ ಆದ್ಯತೆ ಮತ್ತು ಮೂರು ಕಡೆ ಅಖಿಲ ಭಾರತ ಆಯುರ್ವೇದ ಇನ್‌ಸ್ಟಿಟ್ಯೂಟ್ ಸ್ಥಾಪನೆ.
4. ಕೃಷಿ ಮತ್ತು ಶಿಕ್ಷಣ
* ಕರಾವಳಿ ಬೆಳೆಗಳು: ತೆಂಗು, ಗೇರು, ಕೋಕೋ ಹಾಗೂ ಗಂಧದ ಬೆಳೆಗಳಿಗೆ ವಿಶೇಷ ಉತ್ತೇಜನ.
* ಶಿಕ್ಷಣ: ಶಾಲೆಗಳಲ್ಲಿ ‘ಕಂಟೆಂಟ್ ಕ್ರಿಯೇಟರ್ ಲ್ಯಾಬ್’ಗಳ (Content Creator Labs) ಸ್ಥಾಪನೆ.