ನೋಯ್ಡಾ: ನೋಯ್ಡಾದಲ್ಲಿ ಭೀಕರ ರಸ್ತೆ ಹಿಂಸಾಚಾರ (Road Rage) ನಡೆದಿದ್ದು, ಎಂಜಿ ಹೆಕ್ಟರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕುಟುಂಬವಿದ್ದ ಕಾರನ್ನು ಬೆನ್ನಟ್ಟಿ ಅಶ್ಲೀಲ ಸನ್ನೆಗಳ ಮೂಲಕ ಕಿರುಕುಳ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮಹಿಳೆಯರಿದ್ದ ಕಾರನ್ನು ಅಡ್ಡಗಟ್ಟಿ ಭಯಾನಕ ವಾತಾವರಣ ನಿರ್ಮಿಸಿದ್ದ ಈ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.