ಬೆಂಗಳೂರು: ಸುಮಾರು 1,744 ಕೋಟಿ ರೂ. ಆಸ್ತಿಯ ಒಡೆಯ ಎನ್ನಲಾದ ಕೆಜಿಎಫ್ ಬಾಬು ಅವರು ಆದಾಯ ತೆರಿಗೆ (IT) ಇಲಾಖೆಯ ಅಧಿಕಾರಿಗಳಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ. ಇತ್ತೀಚಿನ ಐಟಿ ದಾಳಿಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಕೋಟಿ ಆಸ್ತಿ ಇರುವವರನ್ನು ಸರ್ಕಾರ ಉಳಿಸಿಕೊಳ್ಳಬೇಕು, ನಮಗೆ ಟಾರ್ಚರ್ ಕೊಡಬೇಡಿ” ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.
“ಒಮ್ಮೆ ಪ್ರಾಣ ಹೋದರೆ ಮತ್ತೆ ಬರಲ್ಲ, ದಯವಿಟ್ಟು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಐಟಿ ಅಧಿಕಾರಿಗಳ ನಿರಂತರ ವಿಚಾರಣೆಯಿಂದ ಮಾನಸಿಕವಾಗಿ ಕುಗ್ಗಿರುವ ಅವರು, ಶ್ರೀಮಂತರನ್ನು ಹತ್ತಿಕ್ಕುವ ಬದಲು ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.