Home ಬ್ರೇಕಿಂಗ್ ನ್ಯೂಸ್ಕ್ಯಾಂಪ್ಕೋ ಮಾರುಕಟ್ಟೆ ದರ: ಅಡಿಕೆ ಮತ್ತು ರಬ್ಬರ್ ಬೆಲೆಯಲ್ಲಿ ಸ್ಥಿರತೆ

ಕ್ಯಾಂಪ್ಕೋ ಮಾರುಕಟ್ಟೆ ದರ: ಅಡಿಕೆ ಮತ್ತು ರಬ್ಬರ್ ಬೆಲೆಯಲ್ಲಿ ಸ್ಥಿರತೆ

by Editor
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ನಿಯಮಿತದ ಪುತ್ತೂರು ಶಾಖೆಯಲ್ಲಿ ಫೆಬ್ರವರಿ 02, 2026 ರ ಮಾರುಕಟ್ಟೆ ದರಗಳು ಪ್ರಕಟವಾಗಿವೆ. ಅಡಿಕೆ ಮಾರುಕಟ್ಟೆಯಲ್ಲಿ ಚೋಲ್ ಮತ್ತು ಡಬಲ್ ಚೋಲ್ ಅಡಿಕೆ ಗರಿಷ್ಠ 535 ರೂ. ವರೆಗೆ ಮಾರಾಟವಾಗುವ ಮೂಲಕ ಸ್ಥಿರತೆ ಕಾಯ್ದುಕೊಂಡಿವೆ. ಹೊಸ ಅಡಿಕೆ ಗುಣಮಟ್ಟಕ್ಕೆ ಅನುಗುಣವಾಗಿ ಕನಿಷ್ಠ 260 ರೂ. ನಿಂದ ಗರಿಷ್ಠ 460 ರೂ. ವರೆಗೆ ದರ ಪಡೆದುಕೊಂಡಿದೆ.
ಉಪ ಉತ್ಪನ್ನಗಳಾದ ಫಟೋರಾ (ಹಳೆ) 420 ರೂ. ಹಾಗೂ ಹಳೆ ಉಳ್ಳಿ 280 ರೂ. ವರೆಗೆ ಮಾರಾಟವಾಗಿದೆ. ಅಡಿಕೆ ಮಾತ್ರವಲ್ಲದೆ ಇತರ ವಾಣಿಜ್ಯ ಬೆಳೆಗಳಾದ ಕರಿಮೆಣಸು ಪ್ರತಿ ಕೆ.ಜಿ ಗೆ ಗರಿಷ್ಠ 665 ರೂ. ದಾಟಿದೆ. ಕೊಕ್ಕೊ ಹಸಿ ದರ 110 ರೂ. ಇದ್ದರೆ, ಒಣ ಕೊಕ್ಕೊ 400 ರೂ. ಗರಿಷ್ಠ ದರ ಹೊಂದಿದೆ. ರಬ್ಬರ್ ಮಾರುಕಟ್ಟೆಯಲ್ಲಿ ಗ್ರೇಡ್ ರಬ್ಬರ್ 199 ರೂ. ವರೆಗೆ ಏರಿಕೆ ಕಂಡಿದೆ.

You may also like

Leave a Comment