Home ಬ್ರೇಕಿಂಗ್ ನ್ಯೂಸ್ಲಿಫ್ಟ್‌ನಲ್ಲಿ ಅಗ್ನಿ ಅವಘಡ: ಹೈಡ್ರೋಜನ್ ಬಲೂನ್ ಸ್ಫೋಟಗೊಂಡು ಇಬ್ಬರಿಗೆ ಗಾಯ

ಲಿಫ್ಟ್‌ನಲ್ಲಿ ಅಗ್ನಿ ಅವಘಡ: ಹೈಡ್ರೋಜನ್ ಬಲೂನ್ ಸ್ಫೋಟಗೊಂಡು ಇಬ್ಬರಿಗೆ ಗಾಯ

by Editor

ಮುಂಬೈನಲ್ಲಿ ಲಿಫ್ಟ್ ಒಳಗೆ ಹೈಡ್ರೋಜನ್ ಬಲೂನ್‌ಗಳು ಸ್ಫೋಟಗೊಂಡಿರುವ ರೋಮಾಂಚಕ ಘಟನೆ ನಡೆದಿದ್ದು, ಇದರ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ಲಾಸ್ಟಿಕ್ ಚೀಲದಲ್ಲಿ ಹೈಡ್ರೋಜನ್ ಬಲೂನ್‌ಗಳನ್ನು ಹೊತ್ತು ವ್ಯಕ್ತಿಯೊಬ್ಬರು ಲಿಫ್ಟ್ ಪ್ರವೇಶಿಸಿದಾಗ ಈ ಅವಘಡ ಸಂಭವಿಸಿದೆ. ಅವರೊಂದಿಗೆ ಮತ್ತೊಬ್ಬ ವ್ಯಕ್ತಿ ಟ್ರಾಲಿ ಬ್ಯಾಗ್ ಹಿಡಿದು ಲಿಫ್ಟ್ ಒಳಗೆ ಬಂದಿದ್ದು, ಬಾಗಿಲು ಮುಚ್ಚಿದ ಕ್ಷಣಾರ್ಧದಲ್ಲೇ ಬಲೂನ್‌ಗಳು ಏಕಾಏಕಿ ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಲಿಫ್ಟ್ ಒಳಗಿನ ಜಾಗವೆಲ್ಲಾ ಬೆಂಕಿಯ ಜ್ವಾಲೆಯಿಂದ ತುಂಬಿಹೋಗಿದ್ದು, ನೋಡುವವರನ್ನು ಬೆಚ್ಚಿಬೀಳಿಸುವಂತಿದೆ.

You may also like

Leave a Comment