Home ರಾಜಕೀಯಬೆಳಂದೂರು ಗ್ರಾಮ ಪಂಚಾಯತ್‌ ಆಡಳಿತಾಧಿಕಾರಿಯಾಗಿ ಹರೀಶ್ ಕೆ ಅಧಿಕಾರ ಸ್ವೀಕಾರ

ಬೆಳಂದೂರು ಗ್ರಾಮ ಪಂಚಾಯತ್‌ ಆಡಳಿತಾಧಿಕಾರಿಯಾಗಿ ಹರೀಶ್ ಕೆ ಅಧಿಕಾರ ಸ್ವೀಕಾರ

Administrative Officer Appointed to Belandoor Gram Panchayat Following Term Completion

by Editor

ಕಡಬ ತಾಲೂಕು ಬೆಳಂದೂರು ಗ್ರಾಮ ಪಂಚಾಯಿತಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.

ಪುತ್ತೂರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಹರೀಶ್ ಕೆ ಅವರನ್ನು ಬೆಳಂದೂರು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದ್ದು, ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದ ತೇಜಾಕ್ಷಿ ಬಿ ಕೊಡಂಗೆ ಅವರು ಅಧಿಕಾರ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಮೋಹನ ಅಗಳಿ, ಉಮೇಶ್ವರಿ ಅಗಳಿ, ಗೌರಿ ಮಾದೋಡಿ, ಕುಸುಮ ಅಂಕಜಾಲು, ಹರಿಣಾಕ್ಷಿ ಬನಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಕೆ ಉಪಸ್ಥಿತರಿದ್ದರು.ಅಧಿಕಾರ ಸ್ವೀಕಾರದ ಬಳಿಕ ಆಡಳಿತಾಧಿಕಾರಿ ಹರೀಶ್ ಕೆ ಅವರು ಪಂಚಾಯಿತಿಯ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದಾಗಿ ತಿಳಿಸಿದರು.

 

ಈ ಸುದ್ದಿ ಓದಿದ್ದೀರಾ:

ಭಾಗೀರಥಿ ಮುರುಳ್ಯ ಅವರ ಇಂದಿನ ಪ್ರವಾಸ: ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಸಾರ್ವಜನಿಕರ ಅಹವಾಲು ಸ್ವೀಕಾರ

You may also like

Leave a Comment