Mangalore International Airportಗೆ ACI ವರ್ಲ್ಡ್ ಪ್ರಶಸ್ತಿ
ಮಂಗಳೂರು, :ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (MIA) 2025ನೇ ಸಾಲಿನ “ಅತ್ಯುತ್ತಮ ವಿಮಾನ ನಿಲ್ದಾಣ” ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಗೌರವವನ್ನು Airports Council International (ACI) ವರ್ಲ್ಡ್ ತನ್ನ ಜಾಗತಿಕ ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ASQ) ಸಮೀಕ್ಷೆಯ ಆಧಾರದಲ್ಲಿ ಪ್ರಕಟಿಸಿದೆ.
‘ಆಗಮನ’ (Arrivals) ವಿಭಾಗದಲ್ಲಿ ವಿಶ್ವದ ಕೇವಲ ಆರು ವಿಮಾನ ನಿಲ್ದಾಣಗಳಿಗೆ ಈ ಪ್ರಶಸ್ತಿ ಲಭಿಸಿದ್ದು, ಅವುಗಳಲ್ಲಿ ಮಂಗಳೂರು ಕೂಡ ಒಂದು. ವಿಶೇಷವೆಂದರೆ, MIA ಸತತ ಎರಡನೇ ವರ್ಷ (2024 ಮತ್ತು 2025) ಈ ಸಾಧನೆ ಮಾಡಿದೆ.
ACI ನಡೆಸುವ ASQ ಸಮೀಕ್ಷೆ ಸಂಪೂರ್ಣವಾಗಿ ಪ್ರಯಾಣಿಕರ ನೇರ ಪ್ರತಿಕ್ರಿಯೆಗಳ ಮೇಲೆ ಆಧಾರಿತವಾಗಿದೆ. ವಿಮಾನ ನಿಲ್ದಾಣದ ಸ್ವಚ್ಛತೆ, ಚೆಕ್-ಇನ್ ಹಾಗೂ ಆಗಮನ ಪ್ರಕ್ರಿಯೆಯ ವೇಗ, ಸಿಬ್ಬಂದಿಯ ವರ್ತನೆ, ಸೌಲಭ್ಯಗಳ ಲಭ್ಯತೆ ಮತ್ತು ಒಟ್ಟಾರೆ ಪ್ರಯಾಣಿಕ ಅನುಭವ ಮುಂತಾದ ಅಂಶಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ.
ಈ ಪ್ರಶಸ್ತಿಯನ್ನು 2026ರ ಸೆಪ್ಟೆಂಬರ್ 2ರಂದು ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆಯುವ ACI World Airport Experience Summit ನಲ್ಲಿ ಅಧಿಕೃತವಾಗಿ ಪ್ರದಾನ ಮಾಡಲಾಗುತ್ತದೆ.
ಪ್ರಸ್ತುತ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು Adani Airport Holdings Limited (AAHL) ನಿರ್ವಹಿಸುತ್ತಿದೆ. ಈ ಸಾಧನೆ ಮಂಗಳೂರು ನಗರಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಗುರುತನ್ನು ತಂದುಕೊಟ್ಟಿದೆ.