Home ಮಂಗಳೂರುಶಾಸಕ ವೇದವ್ಯಾಸ ಕಾಮತ್ ರವರ ಅನುದಾನ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

ಶಾಸಕ ವೇದವ್ಯಾಸ ಕಾಮತ್ ರವರ ಅನುದಾನ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

Development works undertaken at a cost of ₹75 lakh under the grant of MLA Vedavyas Kamath.

by Editor

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53ನೇ ಬಜಾಲ್ ವಾರ್ಡಿನ ಜಯನಗರದ ರೋಹಿಣಿ ಮನೆ ಬಳಿಯಿಂದ ಹರಿಣಾಕ್ಷಿ ಮನೆ ತನಕ 75 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಹಲವು ಪ್ರಮುಖರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯು ನಡೆಯಿತು.

ಇದು ಬಹಳಷ್ಟು ವರ್ಷಗಳಿಂದ ಬೇಡಿಕೆಯಿದ್ದ ಅತೀ ಅಗತ್ಯ ಕಾಮಗಾರಿಯಾಗಿದೆ. ಈ ಪ್ರದೇಶವು ಎತ್ತರ ತಗ್ಗು ಇರುವುದರಿಂದ ರಸ್ತೆ ನಿರ್ಮಾಣ ಬಹು ದೊಡ್ಡ ಸವಾಲು. ದಿನನಿತ್ಯದ ಕೆಲಸಗಳಿಗೆ ಇಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿರುವುದು ನನ್ನ ಗಮನದಲ್ಲಿದೆ. ಮೊದಲು ಇಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಿಸಿ ನಂತರ ರಸ್ತೆ ನಿರ್ಮಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ.

ಸ್ಥಳೀಯ ಬಿಜೆಪಿ ಮುಖಂಡರಾದ ಚಂದ್ರಶೇಖರ ಬಜಾಲ್ ರವರ ವಿಶೇಷ ಮನವಿ ಮೇರೆಗೆ ಈ ಕಾಮಗಾರಿ ನಡೆಯುತ್ತಿದ್ದು, ಈ ಹಿಂದಿನ 2022-23 ನೇ ಸಾಲಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರುಗೊಂಡಿರುವ ಕಾಮಗಾರಿಯಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದು ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಆಶಯದಂತೆ ಇಲ್ಲಿ ಅಡೆ ತಡೆಯಿಲ್ಲದೇ ವಾಹನಗಳ ಸಂಚಾರ ಆರಂಭವಾಗುವ ವಾತಾವರಣ ನಿರ್ಮಾಣವಾಗಲಿದೆ, ಎಂದು ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿದ್ದಾರೆ.

ಪ್ರಮುಖರಾದ ಪ್ರವೀಣ್ ನಿಡ್ಡೇಲ್, ಸುಕೇಶ್, ಸುರೇಶ್ ರಾವ್, ಶಿವಾನಂದ, ರಹೀಮ್, ಲಕ್ಷ್ಮಿ, ಸರಸ್ವತಿ, ಶಿವಾಜಿ ರಾವ್, ಶೈಲೇಶ್, ಶಿವಾನಂದ, ಪ್ರಕಾಶ್, ಅಚ್ಯುತ್ ಸಾಲ್ಯಾನ್, ಸೇರಿದಂತೆ ವಾರ್ಡಿನ ಕಾರ್ಯಕರ್ತರು, ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.

You may also like

Leave a Comment