Home ರಾಜ್ಯರಾಮಕ್ಷತ್ರಿಯ ಯುವ ಸೇವಾ ಸಂಘದ ನೂತನ ಸದಸ್ಯರ ಪದಗ್ರಹಣ ಸಮಾರಂಭ ಇಂದು

ರಾಮಕ್ಷತ್ರಿಯ ಯುವ ಸೇವಾ ಸಂಘದ ನೂತನ ಸದಸ್ಯರ ಪದಗ್ರಹಣ ಸಮಾರಂಭ ಇಂದು

RKS YUVA SEVA SANGHA

by Editor

ರಾಮಕ್ಷತ್ರಿಯ ಯುವ ಸೇವಾ ಸಂಘದ ನೂತನ ಸದಸ್ಯರ ಪದಗ್ರಹಣ ಸಮಾರಂಭ ಇಂದು

ಬೆಂಗಳೂರು: ಶ್ರೀರಾಮಕ್ಷತ್ರಿಯ ಯುವ ಸೇವಾ ಸಂಘ ಬೆಂಗಳೂರು (ರಿ.) ವತಿಯಿಂದ ನೂತನ ಸದಸ್ಯರ ಪದಗ್ರಹಣ ಸಮಾರಂಭವು ಇಂದು (ಮಾರ್ಚ್ 01, 2026) ಸಂಜೆ 4.30 ಗಂಟೆಗೆ ನಡೆಯಲಿದೆ.

ವಿಜಯನಗರದ ಕದಂಬ ಸಾಮ್ರಾಟ್ ಸಭಾಂಗಣದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಂಘದ ನೂತನ ಸದಸ್ಯರು ಅಧಿಕೃತವಾಗಿ ಪದಗ್ರಹಣ ಸ್ವೀಕರಿಸಲಿದ್ದಾರೆ. ಸಮಾಜದ ಏಕತೆ, ಸೇವಾ ಚಟುವಟಿಕೆಗಳ ವಿಸ್ತರಣೆ ಹಾಗೂ ಯುವಕರ ಸಂಘಟನೆಗೆ ಬಲ ನೀಡುವ ಉದ್ದೇಶದಿಂದ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಮಾಜದ ಬಂಧುಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

You may also like

Leave a Comment