Home HISTORYಪುತ್ತೂರಿನ ಪುಟಾಣಿ ಪ್ರತಿಭೆ ವಿಶ್ವದ ಗಮನ ಸೆಳೆದ ಕಥೆ:ಕಿರಿಯ ವಯಸ್ಸಿನಲ್ಲಿ ಹ್ಯಾಟ್ರಿಕ್ ದಾಖಲೆ ನಿರ್ಮಿಸಿದ ಅಪ್ರಮೇಯ

ಪುತ್ತೂರಿನ ಪುಟಾಣಿ ಪ್ರತಿಭೆ ವಿಶ್ವದ ಗಮನ ಸೆಳೆದ ಕಥೆ:ಕಿರಿಯ ವಯಸ್ಸಿನಲ್ಲಿ ಹ್ಯಾಟ್ರಿಕ್ ದಾಖಲೆ ನಿರ್ಮಿಸಿದ ಅಪ್ರಮೇಯ

The Little Prodigy from Puttur Captures Global Attention! Aprameya Creates a Hat-Trick of Records at a Young Age

by Editor

The Little Prodigy from Puttur Captures Global Attention!Aprameya Creates a Hat-Trick of Records at a Young Age

ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನಾಲ್ಕೂವರೆ ವರ್ಷದ ಪ್ರತಿಭಾವಂತ ಬಾಲಕ ಅಪ್ರಮೇಯ ಪಿ.ಎನ್ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಪ್ರವೀಣ್ ನಾಯಕ್ ಮತ್ತು ಅಕ್ಷತಾ ದಂಪತಿಗಳ ಪುತ್ರನಾದ ಅಪ್ರಮೇಯ, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಎಲ್‌ಕೆಜಿ ವಿದ್ಯಾರ್ಥಿಯಾಗಿದ್ದಾನೆ.

ಕಿರಿಯ ವಯಸ್ಸಿನಲ್ಲೇ ಅಪೂರ್ವ ಸಾಧನೆ ಮಾಡಿರುವ ಅಪ್ರಮೇಯ ಮೂರು ಪ್ರತಿಷ್ಠಿತ ದಾಖಲೆಗಳನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾನೆ. ವಿವಿಧ ವಿಷಯಗಳಲ್ಲಿನ ಜ್ಞಾನ ಮತ್ತು ಪ್ರತಿಭೆಗೆ ಮಾನ್ಯತೆವಾಗಿ ವರ್ಡ್ ವೈಡ್ ಬುಕ್ ಆಫ್ ರೆಕಾರ್ಡ್ – 2025, ಇಂಡಿಯಾ ಬುಕ್ ಆಫ್ ರೆಕಾರ್ಡ್ – 2024 ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ – 2023 ಪ್ರಶಸ್ತಿಗಳನ್ನು ಪಡೆದು ಹ್ಯಾಟ್ರಿಕ್ ದಾಖಲೆ ನಿರ್ಮಿಸಿದ್ದಾನೆ.

ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಕ್ರಿಯ ಬಾಲಪ್ರತಿಭೆಯಾಗಿರುವ ಅಪ್ರಮೇಯ ಈಗಾಗಲೇ ಹತ್ತಕ್ಕೂ ಅಧಿಕ ಸ್ಪರ್ಧೆಗಳಲ್ಲಿ ವಿಜೇತನಾಗಿದ್ದಾನೆ. ಏಳು ತಿಂಗಳ ಮಗುವಾಗಿದ್ದಾಗಿನಿಂದಲೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಸುಮಾರು 50ಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸಿದ್ದಾನೆ.

ಪ್ರಸ್ತುತ ಸುಗಮ ಸಂಗೀತ ಹಾಗೂ ಚಿತ್ರಕಲೆ ಅಭ್ಯಾಸವನ್ನು ಆರಂಭಿಸಿರುವ ಅಪ್ರಮೇಯ, ತನ್ನ ಪ್ರತಿಭೆಯ ಜೊತೆಗೆ ಮಾನವೀಯ ಗುಣಗಳಲ್ಲಿಯೂ ಮುಂಚೂಣಿಯಲ್ಲಿದ್ದಾನೆ. ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಸೇವಾಭಾವ ಹೊಂದಿರುವ ಈ ಬಾಲಪ್ರತಿಭೆಯ ಸಾಧನೆಯನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಗೌರವ ಸನ್ಮಾನ ಮಾಡಿವೆ.

You may also like

Leave a Comment