Home HISTORYಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ರಾಜ್ಯ ಮಟ್ಟದ ರಂಗ ಬಣ್ಣ ‘ಪ್ರಗತಿ ಸಂಭ್ರಮ- 2026″ ಶಿಬಿರದ ಆಮಂತ್ರಣ ಪತ್ರಿಕೆ ಅನಾವರಣ.

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ರಾಜ್ಯ ಮಟ್ಟದ ರಂಗ ಬಣ್ಣ ‘ಪ್ರಗತಿ ಸಂಭ್ರಮ- 2026″ ಶಿಬಿರದ ಆಮಂತ್ರಣ ಪತ್ರಿಕೆ ಅನಾವರಣ.

Invitation Unveiled for the State-Level Children’s Theatre Camp “Pragathi Sambhrama-2026” at Kaniyoor Pragathi Educational Institution

by anamika

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ರಾಜ್ಯ ಮಟ್ಟದ ರಂಗ ಬಣ್ಣ ‘ಪ್ರಗತಿ ಸಂಭ್ರಮ- 2026″ ಶಿಬಿರದ ಆಮಂತ್ರಣ ಪತ್ರಿಕೆ ಅನಾವರಣ.

 

ಕಾಣಿಯೂರು :- ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ದಿನಾಂಕ 3.4.2026 ರಿಂದ 9.4.2026 ರ ವರೆಗೆ ನಡೆಯುವ ಮಕ್ಕಳ ರಾಜ್ಯಮಟ್ಟದ ರಂಗ ಬಣ್ಣ “ಪ್ರಗತಿ ಸಂಭ್ರಮ- 2026” ಶಿಬಿರದ ಆಮಂತ್ರಣ ಪತ್ರಿಕೆಯನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ಜಯಸೂರ್ಯ ರೈ ಮಾದೋಡಿಯವರು ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ‘ ಆಸರೆ ಸಂಘ ‘ ರುಡ್ ಸೆಟ್ ಉಜಿರೆಯ ಸ್ಥಾಪಕ ಅಧ್ಯಕ್ಷರಾದ ಸುನಿಲ್ ಕುಮಾರ್ ರೈ ಪೆರುವಾಜೆ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾಮಂದಿರ್ ಬೆಳ್ಳಾರೆಯ ಪ್ರಮೋದ್ ಕುಮಾರ್ ರೈ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಸಹ ಆಡಳಿತ ಅಧಿಕಾರಿ ಹೇಮಾನಾಗೇಶ್ ರೈ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್, ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ, ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ, ಹಿರಿಯ ಶಿಕ್ಷಕಿ ಸವಿತಾ ಕೆ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ ಜೂನಿಯರ್ ಶಂಕರ್ ಗಿಲಿ ಗಿಲಿ ಮ್ಯಾಜಿಕ್, ವಂದನಾ ರೈ ಕಾರ್ಕಳ, ವಿದ್ದು ಉಚ್ಚಿಲ ನೀನಾಸಂ, ಕ್ರಿಸ್ಟೋಫರ್ ನೀನಾಸಂ, ವಿಶ್ವನಾಥ ಶೆಟ್ಟಿ ನೆಲ್ಯಾಡಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಮ್ಯಾಜಿಕ್- ಮಾಯಾಲೋಕ, ಗಾಂಧಾರಿ ವಿದ್ಯೆ, ಮಾತನಾಡುವ ಗೊಂಬೆ ,ಮಿಮಿಕ್ರಿ, ಸಂಮೋಹಿನಿ ಶಾಸ್ತ್ರ , ಬಾನೆತ್ತರದ ಗಾಳಿಪಟ, ಅಭಿನಯ ಗೀತೆ, ವರ್ಲಿ ಚಿತ್ರಗಳು, ನೆನಪಿನ ಆಟಗಳು, ಸುಲಭ ಗಣಿತ ಅಲ್ಲದೆ ಇನ್ನು ಹಲವಾರು ತರಬೇತಿಗಳು ನಡೆಯಲಿವೆ. ಶಿಬಿರವು ಬೆಳಿಗ್ಗೆ 9.30 ರಿಂದ ಸಂಜೆ 4 ರ ತನಕ ನಡೆಯಲಿದ್ದು, 4 ವರ್ಷದಿಂದ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಭಾಗವಹಿಸುವ ಮುಕ್ತ ಅವಕಾಶವಿರುತ್ತದೆ.

You may also like

Leave a Comment