ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಸವಣೂರು ಗ್ರಾಮ ಸಮಿತಿಯ ವತಿಯಿಂದ ಶ್ರೀ ರಾಮ ನಾಮ ತಾರಕ ಮಂತ್ರದ ದೀಕ್ಷೆ

ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶದ ಅಂಗವಾಗಿ ಶ್ರೀರಾಮ ಹನುಮಜ್ಯೋತಿ ರಥಯಾತ್ರೆ, ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಇದರ ಸವಣೂರು ಗ್ರಾಮ ಸಮಿತಿಯ ವ್ಯಾಪ್ತಿಗೆ ಒಳಪಡುವ ಸವಣೂರು ,ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಮೊದಲ ಹಂತವಾಗಿ ಸವಣೂರು ಗ್ರಾಮದ ಆನಂದ ಗೌಡರವರ ಮನೆಯಲ್ಲಿ ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಮೊದಲ ಹಂತವಾಗಿ 13 ಮಂದಿ ರಾಮತಾರಕ ಮಂತ್ರದ ಜಪದೀಕ್ಷೆಯನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾದ ಮಹೇಶ್ ಕೆ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಕಾಯರ್ಗ ಸಾಮಾಜಿಕ ಜಾಲತಾಣ ಸಮಿತಿ ಸಂಚಾಲಕರಾದ ಸತೀಶ್ ಬಲ್ಯಾಯ ಭಜನಾ ಸಮಿತಿಯ ಶಿವರಾಮ ಗೌಡ ಮೆದು ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯ ಸಂಚಾಲಕರಾದ ರಾಜೇಶ್ ರೈ ಮುಗೇರು ಅಧ್ಯಕ್ಷರಾದ ಚಂದ್ರಶೇಖರ ಮೆದು ಕಾರ್ಯದರ್ಶಿ ಜಗದೀಶ್ ಇಡ್ಯಾಡಿ ಶ್ರೀಧರ ಸುಣ್ಣಾಜೆ ಗಂಗಾಧರ್ ಸುಣ್ಣಾಜೆ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.