ಕು4ಕ್ಕೆ ಸುಬ್ರಹ್ಮಣ್ಯದಲ್ಲಿ ಕಸ ಎಸೆದ ಭಕ್ತರಿಗೆ ಸ್ಥಳದಲ್ಲೇ ಜಾಗೃತಿ ಮೂಡಿಸಿದ ಸ್ವಚ್ಛತಾ ಸಮಿತಿ
ಕುಕ್ಕೆ ಸುಬ್ರಹ್ಮಣ್ಯ: ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾರ್ವಜನಿಕ ಸ್ವಚ್ಛತೆಗೆ ಧಕ್ಕೆಯಾದ ಘಟನೆ ಒಂದು ಬೆಳಕಿಗೆ ಬಂದಿದೆ. ಕಾಶಿಕಟ್ಟೆಯ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಎದುರುಗಡೆ ರಸ್ತೆಯಲ್ಲಿ ಭಕ್ತರೊಬ್ಬರು ಕಸ ಎಸೆದಿರುವುದು ಗಮನಕ್ಕೆ ಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ವಚ್ಛ ಜಾಗೃತಿ ಸಮಿತಿ ಅಭಿಯಾನದ ಸದಸ್ಯರಾದ ಶಿವರಾಮ್ ರೈ ಹಾಗೂ ಪವನ್ ಎಂ.ಡಿ ಸ್ಥಳಕ್ಕೆ ಭೇಟಿ ನೀಡಿ, ಕಸ ಎಸೆಯದಂತೆ ಭಕ್ತರಿಗೆ ಜಾಗೃತಿ ಮೂಡಿಸಿದರು. “ಸ್ವಚ್ಛ ಭಾರತ” ಅಭಿಯಾನದ ಮಹತ್ವವನ್ನು ವಿವರಿಸಿ, ಇಂತಹ ಪುಣ್ಯ ಕ್ಷೇತ್ರಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ತಪ್ಪು ಎಂದು ತಿಳಿಸಿ, ನಿಯಮ ಉಲ್ಲಂಘನೆ ಮಾಡಿದರೆ ಪಂಚಾಯತ್ ವತಿಯಿಂದ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಜಾಗೃತಿ ಮೂಡಿಸಿದ ಬಳಿಕ, ಕಸ ಎಸೆದ ವ್ಯಕ್ತಿಯೇ ತನ್ನಿಂದ ಎಸೆಯಲ್ಪಟ್ಟ ಕಸವನ್ನು ಸ್ವಚ್ಛಗೊಳಿಸಿ, ಕಸದ ತೊಟ್ಟಿಗೆ ಹಾಕಿದರು.
ಈ ಘಟನೆ ಮೂಲಕ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆಯು ಮತ್ತೊಮ್ಮೆ ಸ್ಪಷ್ಟವಾಗಿದೆ.