Home HISTORYಸಾಂದೀಪನಿ ವಿದ್ಯಾಲಯದಲ್ಲಿ ಬೇಸಿಗೆ ಶಿಬಿರ

ಸಾಂದೀಪನಿ ವಿದ್ಯಾಲಯದಲ್ಲಿ ಬೇಸಿಗೆ ಶಿಬಿರ

by anamika

ಸಾಂದೀಪನಿ ವಿದ್ಯಾಲಯದಲ್ಲಿ ಬೇಸಿಗೆ ಶಿಬಿರ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ ,ಬುಲ್ ಬುಲ್ ಗಳ ದಳ ಹಂತದ ಎರಡು ದಿನದ ವಾರ್ಷಿಕ ಬೇಸಿಗೆ ಶಿಬಿರವನ್ನು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು.

 

ಮೊದಲ ದಿನದ ಶಿಬಿರವನ್ನು ದ್ವಜಾರೋಹಣ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಶಿಬಿರಕ್ಕೆ ಶುಭ ಹಾರೈಸಿದರು.

ಶಾಲಾ ಮುಖ್ಯ ಗುರು ಶ್ರೀ ಪ್ರಸನ್ನ ಕೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ಶಿಸ್ತು ಮತ್ತು ಧೈರ್ಯವು ಭವಿಷ್ಯದಲ್ಲಿ ಮಕ್ಕಳಲ್ಲಿ ಸಮಾಜ ಸೇವೆ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಶುಭ ಹಾರೈಸಿದರು.

ಸ್ಕೌಟ್ ಮಾಸ್ಟರ್ ಶ್ರೀ ಮುರಳಿ ಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು.ನಂತರ ವಿದ್ಯಾರ್ಥಿಗಳನ್ನು ಗೇರು ಸಂಶೋಧನಾ ಕೇಂದ್ರ ಮೊಟ್ಟೆತ್ತಡ್ಕ ಮತ್ತು ನವನೀತ ನರ್ಸರಿ ಗೆ ಕರೆದುಕೊಂಡು ಹೋಗಲಾಯಿತು. ವಿದ್ಯಾರ್ಥಿಗಳು ತೋಟಗಾರಿಕೆ, ಕೃಷಿಯ ಬಗ್ಗೆ ಜ್ಞಾನವನ್ನು ಪಡೆದುಕೊಂಡರು.

ಮದ್ಯಾಹ್ನದ ಅವಧಿಯಲ್ಲಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಸುಚೇತ್ ಇವರಿಂದ ವಿವಿಧ ಚಟುವಟಿಕೆ ಮತ್ತು ಕ್ರಾಫ್ಟ್ ಗಳನ್ನು ಮಾಡಲಾಯಿತು.ಎರಡನೇ ದಿನದ ಶಿಬಿರದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ ರವರು ಮಾತನಾಡಿ ಸಮಾಜಸೇವೆ ಮಾಡುವ ಅವಕಾಶ ನಿಮಗೆ ದೊರಕಿದೆ ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಉತ್ತಮ ಭವಿಷ್ಯ ನಿಮಗಿದೆ ಎಂದು ಶುಭ ಹಾರೈಸಿದರು.

ಸಂಸ್ಥೆಯ ಕೋಶಾಧಿಕಾರಿ ಶ್ರೀ ಹರೀಶ್ ಪುತ್ತೂರಾಯರು ಮಾತನಾಡಿ ವಿದ್ಯಾರ್ಥಿಗಳ ಶಿಸ್ತು ಮತ್ತು ಶ್ರದ್ದೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಸ್ಕೌಟ್ ಗೈಡ್ ಗೆ ಅಭಿನಂದನೆ ಸಲ್ಲಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಶ್ರೀ ಚಂದ್ರಾಕ್ಷ ರವರು ಮಾತನಾಡಿ ಶುಭ ಹಾರೈಸಿದರು.ನಂತರ ಶ್ರೀ ಚಂದ್ರಾಕ್ಷ ರವರು ವಿವಿಧ ಚಟುವಟಿಕೆಗಳನ್ನು ಹಾಗೂ ಸ್ಕೌಟ್ ಗೈಡ್ ಗೆ ಸಂಬಂಧಿತ ಪ್ಯಾಟ್ರೋಲ್ ಚಟುವಟಿಕೆ, ಗಂಟುಗಳು, ಪ್ರಥಮ ಚಿಕಿತ್ಸೆ, ಸೀಟಿ ಸಂಕೇತ, ದಳ ಸಭೆ, ಕೈ ಸನ್ನೆ ಗಳು, ಇತ್ಯಾದಿ ವಿಚಾರಗಳನ್ನು ಪ್ರಾಯೋಗಿಕವಾಗಿ ತಿಳಿಸಿದರು.

ನಂತರ ಸಮಾರೋಪ ಸಮಾರಂಭ ನಡೆಯಿತು. ಸಂಸ್ಥೆಯ ಮುಖ್ಯ ಗುರುಗಳಾದ ಶ್ರೀ ಪ್ರಸನ್ನ ಕೆ ರವರು ಮಾತನಾಡಿ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಶ್ರೀ ಚಂದ್ರಾಕ್ಷ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೈಡ್ ಕ್ಯಾಪ್ಟನ್ಶ್ರೀಮತಿ ಗೀತಾ ವಂದಿಸಿದರು.ಶಿಬಿರದಲ್ಲಿ ಸ್ಕೌಟ್ ಮಾಸ್ಟರ್ ಶ್ರೀ ಮುರಳಿಕೃಷ್ಣ, ಶ್ರೀಮತಿ ವಿಜೇತಾ, ಫ್ಲಾಕ್ ಲೀಡರ್ ಶ್ರೀಮತಿ ಅನಿತಾ, ಶ್ರೀಮತಿ ನಯನ, ಶ್ರೀಮತಿ ಜ್ಯೋತಿ

ಕಬ್ ಮಾಸ್ಟರ್ಸ್ ಶ್ರೀಮತಿ ನಯನ ಶ್ರೀಮತಿ ಭವಿತಾ ಗೈಡ್ ಕ್ಯಾಪ್ಟನ್ ಶ್ರೀಮತಿ ರೇಷ್ಮಾ, ಶ್ರೀಮತಿ ಗೀತಾ, ಶ್ರೀಮತಿ ಸ್ಮಿತಾ, ಶ್ರೀಮತಿ ರೇಣುಕಾಹಾಗೂ ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳು ಶಿಕ್ಷಕ- ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

You may also like

Leave a Comment