Home HISTORYವಿಶ್ವ ಅರಣ್ಯ ದಿನಾಚರಣೆ ಹಿನ್ನೆಲೆ: ಪೆರ್ನಾಜೆಯಿಂದ ಪಂಜಿಗುಂಡಿವರೆಗೆ ಭವ್ಯ ಸ್ವಚ್ಛತಾ ಅಭಿಯಾನ

ವಿಶ್ವ ಅರಣ್ಯ ದಿನಾಚರಣೆ ಹಿನ್ನೆಲೆ: ಪೆರ್ನಾಜೆಯಿಂದ ಪಂಜಿಗುಂಡಿವರೆಗೆ ಭವ್ಯ ಸ್ವಚ್ಛತಾ ಅಭಿಯಾನ

by anamika

ವಿಶ್ವ ಅರಣ್ಯ ದಿನಾಚರಣೆ ಹಿನ್ನೆಲೆ: ಪೆರ್ನಾಜೆಯಿಂದ ಪಂಜಿಗುಂಡಿವರೆಗೆ ಭವ್ಯ ಸ್ವಚ್ಛತಾ ಅಭಿಯಾನ

ಸುಳ್ಯ: ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ಪೆರ್ನಾಜೆಯಿಂದ ಪಂಜಿಗುಂಡಿವರೆಗೆ ಸ್ವಚ್ಛತಾ ಅಭಿಯಾನವು ಶನಿವಾರ (ಮಾ. 21) ಯಶಸ್ವಿಯಾಗಿ ನಡೆಯಿತು.

ಕರ್ನಾಟಕ ಅರಣ್ಯ ಇಲಾಖೆ ಪುತ್ತೂರು ವಲಯದ ನೇತೃತ್ವದಲ್ಲಿ, ಸ್ಕೌಟ್ ಗೈಡ್ ಯುವಧ್ವನಿ, ಯುವಕ ಮಂಡಲ ಕನಕಮಜಲು ಹಾಗೂ ಗ್ರಾಮ ಪಂಚಾಯತ್ ಕನಕಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೆರ್ನಾಜೆಯಿಂದ ಆನೆಗುಂಡಿ ಮಾರ್ಗವಾಗಿ ಪಂಜಿಗುಂಡಿವರೆಗೆ ರಸ್ತೆ ಎರಡೂ ಬದಿಗಳಲ್ಲಿ ಸಂಗ್ರಹವಾಗಿದ್ದ ಕಸದ ತೆರವುಗೊಳಿಸುವ ಮೂಲಕ ಪರಿಸರ ಸ್ವಚ್ಛತೆಗೆ ಒತ್ತು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ವಲಯ ಅರಣ್ಯಾಧಿಕಾರಿ ಕಿರಣ್, ಕನಕಮಜಲು ಗಸ್ತು ಉಪವಲಯ ಅರಣ್ಯಾಧಿಕಾರಿ ರಂಜಿತಾ ಪಿ. ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಇದಲ್ಲದೆ, ಕನಕಮಜಲು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀಧರ್ ಕುತ್ಯಾಳ ಮತ್ತು ಶಾರದಾ ಉಗ್ಗಮೂಲೆ, ಮಾಜಿ ಸದಸ್ಯ ಜಗನ್ನಾಥ ಮಾಣಿಮಜಲು, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಜಯಕುಮಾರ್ ನರಿಯೂರು, ಯುವಕ ಮಂಡಲದ ಅಧ್ಯಕ್ಷ ಅಶ್ವಥ್ ಅಡ್ಕಾರು, ಸ್ಕೌಟ್ ಗೈಡ್ ಯುವಧ್ವನಿ ಅಧ್ಯಕ್ಷ ಭರತ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ವಚ್ಛತಾ ಅಭಿಯಾನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಸುಳ್ಯ ರೋಟರಿ ಸಂಸ್ಥೆಯ ಸದಸ್ಯರು ಹಾಗೂ ವಿನೋಬಾನಗರ ವಿವೇಕಾನಂದ ಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.

ಕಾರ್ಯಕ್ರಮವನ್ನು ಕೀರ್ತನ್ ನಿರೂಪಿಸಿದರು.

You may also like

Leave a Comment