**ಸವಣೂರು ಗ್ರಾಮ ಸಮಿತಿ ವತಿಯಿಂದ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ರಾಮ ತಾರಕ ಮಂತ್ರ.*
ಸವಣೂರು ಗ್ರಾಮ ಸಮಿತಿ ವ್ಯಾಪ್ತಿಗೆ ಒಳಪಡುವ ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮದ ಭಕ್ತಾಧಿಗಳು ಶ್ರೀ ರಾಮ ತಾರಕ ಮಂತ್ರದ ದೀಕ್ಷೆಯನ್ನು ಪಡೆದ ಭಕ್ತಾರು ಏಕಕಾಲದಲ್ಲಿ 1008 ರಂತೆ ಒಟ್ಟು 42336 ಜಪವನ್ನು ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ಗೌರಿ ಸದನ ಸಭಾಂಗಣದಲ್ಲಿ ಮಾ.22 ರಂದು ನಡೆಸಿದರು. ಕಾರ್ಯಕ್ರಮದಲ್ಲಿ ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ ಮಾಹಿತಿ ನೀಡಿದರು. ನಾಗರಾಜ ನಿಡ್ವಣ್ಣಾಯ ಶ್ರೀ ರಾಮ ತಾರಕ ಮಂತ್ರದ ದೀಕ್ಷೆ ನೀಡಿ ಸಾಮೂಹಿಕ ಜಪಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಸಮಿತಿಯ ಅಧ್ಯಕ್ಷ ಮಹೇಶ್ ಕೆ ಸವಣೂರು, ಪ್ರಧಾನ ಕಾರ್ಯದರ್ಶಿ ತಾರನಾಥ ಕಾಯರ್ಗ, ಜಪಯಜ್ಞ ಸಮಿತಿ ಸಂಚಾಲಕರಾದ ಗಿರಿಶಂಕರ ಸುಲಾಯ, ಸಹಸಂಚಾಲ
ಕರಾದ ಭರತ್ ರೈ ಪಾಲ್ತಾಡಿ, ಲಿಂಗಪ್ಪ ರೈ ಚೆಂಬುತ್ತೋಡಿ, ರಥಯಾತ್ರಾ ಸಮಿತಿ ಸಂಚಾಲಕರಾದ ಚೇತನ್ ಕುಮಾರ್ ಕೋಡಿಬೈಲು, ಲಕ್ಷೋತ್ತರ ನಾರಿಕೇಳ ಸಹಸಂಚಾಲಕರಾದ ಪುಟ್ಟಣ್ಣ ಗೌಡ ಬದಿಯಡ್ಕ, ಭಜನಾ ಸಮಿತಿಯ ಸಹಸಂಚಾಲಕರಾದ ಶಿವರಾಮ ಗೌಡ ಮೆದು, ಮಹಿಳಾ ಸಮಿತಿ ಸಂಚಾಲಕರಾದ ಇಂದಿರಾ ಬಿ ಕೆ , ಸಾಮಾಜಿಕ ಜಾಲತಾಣದ ಸಂಚಾಲಕರಾದ ಸತೀಶ್ ಬಲ್ಯಾಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಚೇತನ ಪಾಲ್ತಾಡಿ, ಶಿಕ್ಷಕಿ ಸರಿತಾ ಡಿ, ಬಾಬು ದೇವಸ್ಯ, ಪ್ರಮೋದ್ ಬೊಳ್ಳಾಜೆ, ಮೋಹಿತ್ ಕುಮಾರಮಂಗಲ, ದಯಾನಂದ ಮೆದು ಮೊದಲಾದವರು ಭಾಗವಹಿಸಿದರು.