Home HISTORYಜಾತ್ರೋತ್ಸವದ ಸಡಗರಕ್ಕೆ ಸಂಪಾಜೆ ಸಜ್ಜು: ಪಂಚಲಿಂಗೇಶ್ವರ ದೇವರಿಗೆ ಆಮಂತ್ರಣ ಪತ್ರಿಕೆ ಬಿಡುಗಡೆ

ಜಾತ್ರೋತ್ಸವದ ಸಡಗರಕ್ಕೆ ಸಂಪಾಜೆ ಸಜ್ಜು: ಪಂಚಲಿಂಗೇಶ್ವರ ದೇವರಿಗೆ ಆಮಂತ್ರಣ ಪತ್ರಿಕೆ ಬಿಡುಗಡೆ

by anamika

ಜಾತ್ರೋತ್ಸವದ ಸಡಗರಕ್ಕೆ ಸಂಪಾಜೆ ಸಜ್ಜು

ಪಂಚಲಿಂಗೇಶ್ವರ ದೇವರಿಗೆ ಆಮಂತ್ರಣ ಪತ್ರಿಕೆ ಬಿಡುಗಡೆ

ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರೋತ್ಸವವು ಎಪ್ರಿಲ್ 11 ಮತ್ತು 12ರಂದು ಭಕ್ತಿಭಾವದಿಂದ ನಡೆಯಲಿದೆ. ಈ ಮಹೋತ್ಸವದ ಅಂಗವಾಗಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು.

ಕಾರ್ಯಕ್ರಮದಲ್ಲಿ ಮೊಕೇಸರರಾದ ಎಂ.ಬಿ. ಸದಾಶಿವ, ದೇವಸ್ಥಾನದ ಅಧ್ಯಕ್ಷರಾದ ಜಯಕುಮಾರ್ ಚೆಸ್ಕಾರ್, ಕಾರ್ಯದರ್ಶಿ ಕೇಶವ ಚೌಟಾಜೆ, ಕೋಶಾಧಿಕಾರಿ ಲೋಹಿತ್ ಹೊದ್ದೆಟ್ಟಿ ಸೇರಿದಂತೆ ಪ್ರಮುಖರು ಭಾಗವಹಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಇಂದಿರಾ ದೇವಿಪ್ರಸಾದ್, ಟೀನಾ ಚರಣ್, ಕೆ.ಜಿ. ಗೋಪಾಲಕೃಷ್ಣ ಭಟ್, ಬಿ.ಆರ್. ಪದ್ಮಯ್ಯ, ಪುರುಷೋತ್ತಮ ಬಾಳೆಹಿತ್ತಿಲು, ರಾಜಾರಾಮ ಕಳಗಿ, ಯು.ಬಿ. ಚಕ್ರಪಾಣಿ, ಪಿ.ಎಲ್. ಸುರೇಶ್, ಎಲ್. ಸುರೇಶ್, ಆನಂದ ಕರಿಂಬಿ, ವಾಸುದೇವ ಕಟ್ಟೆಮನೆ, ರುಕ್ಷ್ಮಯ್ಯ ದಾಸ್, ರಿತಿನ್ ದೆಮ್ಮಲೆ, ಪ್ರೀತಮ್ ಯು.ಬಿ., ಭಾರತಿ ದೇವರಗುಂಡ, ಅಶ್ವಿನಿ ಕಳಗಿ, ಪುಷ್ಪವತಿ ಕೊಯಿನಾಡ್, ನಾರಾಯಣ ಭಟ್ ಕುಂದಲಕಾಡು, ವಿಮಲ ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

ಜಾತ್ರೋತ್ಸವದ ದಿನಗಳಲ್ಲಿ ವಿಶೇಷ ಪೂಜೆಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

You may also like

Leave a Comment