🔰 ಪೈಚಾರು ಮಾರಿಯಮ್ಮ – ವೀರಭದ್ರಸ್ವಾಮಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಗೊನೆ ಮುಹೂರ್ತ 🔰
ಪುತ್ತೂರು: ಪೈಚಾರು ಶ್ರೀ ಮಾರಿಯಮ್ಮ – ವೀರಭದ್ರಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗೊನೆ ಮುಹೂರ್ತ ಕಾರ್ಯಕ್ರಮವು ಏಪ್ರಿಲ್ 13ರಂದು ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಂದರ್ ರಾವ್, ಕಾರ್ಯಾಧ್ಯಕ್ಷ ದೇವಿಪ್ರಸಾದ್ ಕೆ.ಎಸ್., ಸಂಚಾಲಕ ರಾಜೇಶ್ ಶೆಟ್ಟಿ ಮೇನಾಲ, ಕೋಶಾಧಿಕಾರಿ ಕೇಶವ ಮಾಸ್ತರ್ ಸೇರಿದಂತೆ ಪ್ರಮುಖರು ಭಾಗವಹಿಸಿದರು.

ಇದೇ ವೇಳೆ ಸಹ ಸಂಚಾಲಕ ನಾರಾಯಣ ಎಸ್.ಎಂ., ಗೌರವ ಸಲಹೆಗಾರರಾದ ಬಾಲಗೋಪಾಲ ಸೇರ್ಕಜೆ, ಶ್ರೀನಿವಾಸ್ ರಾವ್ ಹಳೆ ಗೇಟು, ಆನಂದ ಬೆಟ್ಟಂಪಾಡಿ, ಚಂದ್ರಶೇಖರ ಎ., ಕಾರ್ಯದರ್ಶಿ ರಾಘವ ಪೆರಾಜೆ, ಜಗದೀಶ್ ಎನ್.ಆರ್. ಹಾಗೂ ಉಪಸಮಿತಿ ಸಂಚಾಲಕರಾದ ಅವಿನ್ ಬೆಟ್ಟಂಪಾಡಿ, ಪ್ರಶಾಂತ್ ಜಯನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದಲ್ಲದೆ ಮೊಕ್ತೇಸರರು, ಸಮಿತಿ ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.