Home Uncategorizedಗೃಹ ಪ್ರವೇಶದ ಅಂಗವಾಗಿ ಯಕ್ಷ-ಗಾನ ಸಿಂಚನ ಹಾಗೂ ತಾಳಮದ್ದಳೆ ಕಾರ್ಯಕ್ರಮ ಯಶಸ್ವಿ

ಗೃಹ ಪ್ರವೇಶದ ಅಂಗವಾಗಿ ಯಕ್ಷ-ಗಾನ ಸಿಂಚನ ಹಾಗೂ ತಾಳಮದ್ದಳೆ ಕಾರ್ಯಕ್ರಮ ಯಶಸ್ವಿ

by anamika

ಗೃಹ ಪ್ರವೇಶದ ಅಂಗವಾಗಿ ಯಕ್ಷ-ಗಾನ ಸಿಂಚನ ಹಾಗೂ ತಾಳಮದ್ದಳೆ ಕಾರ್ಯಕ್ರಮ ಯಶಸ್ವಿ

ಕುದ್ರೋಳಿ: ಶ್ರೀ ಸುಂದರ ಗೌಡ ಕುದ್ರೋಳಿ ಅವರ ನೂತನ “ಅನುಗ್ರಹ ನಿಲಯ” ಮನೆಯ ಗೃಹ ಪ್ರವೇಶದ ಅಂಗವಾಗಿ ಆಯೋಜಿಸಲಾದ ಯಕ್ಷಗಾನ ಸಿಂಚನ ಹಾಗೂ ತಾಳಮದ್ದಳೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಯಕ್ಷಗಾನ ಗಾನ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಘದ ಕಲಿಕಾ ಭಾಗವತೆಯರಾದ ಕುಮಾರಿ ಅನನ್ಯಾ ಜಯರಾಜ್, ಕುಮಾರಿ ಅಂಜನಾ ಜಯರಾಜ್, ಕುಮಾರಿ ನಾಧ್ಯ ಕೃಷ್ಣ ಹಾಗೂ ಕುಮಾರಿ ಪೂಜಾಶ್ರೀ ರಾಜಕುಮಾರ್ ಅವರು ತಮ್ಮ ಸುಶ್ರಾವ್ಯ ಗಾಯನದ ಮೂಲಕ ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದರು. ಇವರಿಗೆ ಸಭಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ನಂತರ ನಡೆದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಮೋಹನ ಮೆಣಸಿನಕಾನ, ಕುಮಾರಿ ಅಂಜನಾ ಜಯರಾಜ್ ಮತ್ತು ಕುಮಾರಿ ನಾಧ್ಯ ಕೃಷ್ಣ ಸೇವೆ ಸಲ್ಲಿಸಿದರು. ಚೆಂಡೆ ಹಾಗೂ ಮದ್ದಲೆ ವಾದಕರಾಗಿ ಶ್ರೀ ಅಂಬೆಮೂಲೆ ಶಿವಶಂಕರ ಭಟ್ ಹಾಗೂ ಶ್ರೀ ಸದಾನಂದ ಮಯ್ಯಾಳ ಅವರು ಸಹಕಾರ ನೀಡಿದರು.

ಪಾತ್ರವರ್ಗದಲ್ಲಿ ಶ್ರೀರಾಮನಾಗಿ ಶ್ರೀ ನಾರಾಯಣ ಪಾಟಾಳಿ ಮಯ್ಯಾಳ, ಲಕ್ಷ್ಮಣನಾಗಿ ಶ್ರೀ ಸಂಜೀವ ರಾವ್ ಮಯ್ಯಾಳ, ಸೀತೆಯಾಗಿ ಕುಮಾರಿ ಅನನ್ಯಾ ಜಯರಾಜ್ ಅಭಿನಯಿಸಿದರು. ಋಷಿಗಳಾಗಿ ಶ್ರೀ ಅಚ್ಯುತ ಮಾಸ್ತರ್, ಈಶ್ವರಮಂಗಲ ಕುಮಾರ್ ಚೇತನ್ ಹಾಗೂ ಶ್ರೀ ರಾಮ ನಾಯ್ಕ, ಶೂರ್ಪನಖಿಯಾಗಿ ಸಂಘದ ಸಂಚಾಲಕರಾದ ಶ್ರೀ ಪ್ರಭಾಕರ ಆಚಾರ್ಯ ಹಿರಿಯಾನ, ಖರಾಸುರನಾಗಿ ಶ್ರೀ ಶೀನಪ್ಪ ಮೇನಾಲ, ತ್ರಿಶಿರನಾಗಿ ಶ್ರೀ ರಾಮ ನಾಯ್ಕ ಬಸಿರಡ್ಕ ಮತ್ತು ದೂಷಣನಾಗಿ ಮಾಸ್ಟರ್ ಸ್ವಸ್ತಿಕ್ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮನೆಯ ಹಿರಿಯರಾದ ಶ್ರೀ ಸುಂದರ ಗೌಡ ಕುದ್ರೋಳಿ ಅವರು ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀಮತಿ ಶೈಲಜಾ ಜಯರಾಜ್ ವಂದನಾರ್ಪಣೆ ಮಾಡಿದರು.

ಈ ಸಾಂಸ್ಕೃತಿಕ ಕಾರ್ಯಕ್ರಮವು ಉಪಸ್ಥಿತರಿದ್ದ ಸಭಿಕರ ಮನಸೆಳೆಯುವ ಮೂಲಕ ಭರ್ಜರಿ ಯಶಸ್ಸು ಕಂಡಿತು.

You may also like

Leave a Comment