*ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ*
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು (ರಿ) ನರಿಮೊಗರು,ಪುತ್ತೂರು ಇಲ್ಲಿನ ಭಾರತ್ ಸ್ಕೌಟ್ಸ್, ಗೈಡ್ಸ್, ಕಬ್ ,ಬುಲ್ ಬುಲ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ಶಿಕ್ಷಕರಾದ ಶ್ರೀಯುತ ಆನಂದ್ ಇವರು ತಿಳಿಸಿದರು.
ಈ ವಿಶೇಷ ದಿನದಂದು ಸಂಸ್ಥೆಯ ಮುಖ್ಯ ಗುರುಗಳಾದ ಶ್ರೀಯುತ ಪ್ರಸನ್ನ .ಕೆ ಇವರಿಗೆ ಸ್ಕೌಟ್ ವಿದ್ಯಾರ್ಥಿ ಜನಿತ್, ಪ್ಲಾಕ್ ಲೀಡರ್ ಶ್ರೀಮತಿ ಅನಿತಾ.ಕೆ ಇವರು ತಲಾ ಎರಡು ಗಿಡಗಳನ್ನು ಹಸ್ತಾಂತರ ಮಾಡಿದರು. ಮುಖ್ಯ ಗುರುಗಳು ಶಾಲಾ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬುಲ್ ಬುಲ್ ವಿದ್ಯಾರ್ಥಿಗಳು ತಾವು ತಯಾರಿಸಿದ ಬೀಜದುಂಡೆಗಳನ್ನು ಕಾಡಿಗೆ ಬಿಸಾಡುವ ಮೂಲಕ ವಿಶಿಷ್ಠವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಿದರು. ಸ್ಕೌಟ್ಸ್, ಗೈಡ್ಸ್, ಕಬ್ ,ಬುಲ್ ಬುಲ್ ವಿಭಾಗದ ವಿದ್ಯಾರ್ಥಿಗಳು ತಲಾ ಒಂದೊಂದು ಗಿಡವನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನು ಮೆರೆದರು.

ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಆಡಳಿತ ಮಂಡಳಿಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಶಿಬರ, ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣಪ್ರಸಾದ್ ಕೆದಿಲಾಯ, ಕೋಶಾಧಿಕಾರಿಗಳಾದ ಶ್ರೀಯುತ ಹರೀಶ್ ಪುತ್ತೂರಾಯ ,ಆಡಳಿತ ಮಂಡಳಿಯ ಪದಾಧಿಕಾರಿಗಳು,ಸದಸ್ಯರು, ಮುಖ್ಯೋಪಾಧ್ಯಾಯರು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಶಿಕ್ಷಕ ವೃಂದ, ಸ್ಕೌಟ್ಸ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್,ಪ್ಲಾಕ್ ಲೀಡರ್ಸ್, ಕಬ್ ಮಾಸ್ಟರ್ಸ್, ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಹಕರಿಸಿದರು.