Home HISTORYಬಾಗಲಕೋಟೆ ಉಪಚುನಾವಣೆ: ಗೆಲುವನ್ನು ತಂದೆಗೆ ಅರ್ಪಿಸಿ ಉಮೇಶ್​​ ಮೇಟಿ ಭಾವುಕ

ಬಾಗಲಕೋಟೆ ಉಪಚುನಾವಣೆ: ಗೆಲುವನ್ನು ತಂದೆಗೆ ಅರ್ಪಿಸಿ ಉಮೇಶ್​​ ಮೇಟಿ ಭಾವುಕ

by anamika

ಬಾಗಲಕೋಟೆ ಉಪಚುನಾವಣೆ: ಗೆಲುವನ್ನು ತಂದೆಗೆ ಅರ್ಪಿಸಿ ಉಮೇಶ್​​ ಮೇಟಿ ಭಾವುಕ

 

ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿದ್ದಾರೆ. 21,866 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದಾರೆ. ಉಮೇಶ್ ಮೇಟಿ 97,941 ಮತಗಳನ್ನು ಪಡೆದರೆ, ವೀರಣ್ಣ ಚರಂತಿಮಠ 76,075 ಮತಗಳನ್ನು ಗಳಿಸಿದ್ದಾರೆ.

ಗೆಲುವಿನ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಉಮೇಶ್ ಮೇಟಿ, ತಮ್ಮ ವಿಜಯವನ್ನು ತಂದೆ ಹೆಚ್​​.ವೈ. ಮೇಟಿ ಅವರಿಗೆ ಅರ್ಪಿಸಿ ಭಾವುಕರಾದರು. ಅಲ್ಲದೆ, ಇದು ತಮ್ಮ ಗೆಲುವಲ್ಲ, ಕಾರ್ಯಕರ್ತರ ಗೆಲುವು ಎಂದು ಹೇಳಿದ್ದಾರೆ.

You may also like

Leave a Comment