ಸುಳ್ಯ ಮಂಡಲದ ವತಿಯಿಂದ ಪ್ರಧಾನಮಂತ್ರಿಯವರ 134 ನೇ ಮನ್ ಕೀ ಬಾತ್ ಮತ್ತು ಕಾರ್ಯಕರ್ತರ ಸಭೆಯು ಇಂದು ಶಾಸಕರ ನಿವಾಸ ಮುರುಳ್ಯದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷರಾದ *ಶ್ರೀ ಸತೀಶ್ ಕುಂಪಲ* ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸತೀಶ್ ಕುಂಪಲ ಸುಳ್ಯ ಮಂಡಲ ಕಳೆದ ಅವೃತಿಯ ಮನ್ ಕೀ ಬಾತ್ ಕಾರ್ಯಕ್ರಮ 100% ವೀಕ್ಷಣೆ ಮಾಡಿ ನಂ 1ಸ್ಥಾನವನ್ನು ಪಡೆದುಕೊಂಡಿತು ಈ ಬಾರಿಯೂ ಅದೇ ಫಲಿತಾಂಶ ಬರಲಿ ಮತ್ತು ಜೂನ್ 5ರಿಂದ ಆರಂಭವಾಗುವ SIR ಬಗ್ಗೆಯೂ ವಿಶೇಷ ಗಮನ ಹರಿಸಿ ಮತದಾರರಿಗೆ ಯಾವುದೇ ತೊಂದರೆಗಳು ಆಗದ ರೀತಿಯಲ್ಲಿ BLA2ಗಳು ಮತ್ತು ಕಾರ್ಯಕರ್ತರು ಕೆಲಸಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.



ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಪ್ರಧಾನಕಾರ್ಯದರ್ಶಿ ಯತೀಶ ಅರ್ವಾರ,ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ,ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಮಂಡಲ ಪ್ರಧಾನಕಾರ್ಯದರ್ಶಿ ವಿನಯ್ ಕಂದಡ್ಕ, ಮಹಿಳಾ ಮೊರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ,ಒಬಿಸಿ ಮೊರ್ಚಾ ಅಧ್ಯಕ್ಷ ಗಿರೀಶ ಪೈಲಾಜೆ, ಯುವಮೊರ್ಚಾ ಅಧ್ಯಕ್ಷ ಶ್ರಿಕಾಂತ್ ಮಾವಿನಕಟ್ಟೆ,ಮಂಡಲ ಕೋಶಾಧಿಕಾರಿ ಶುಭೋದ್ ಶೆಟ್ಟಿ ಮೇನಾಲ, ಮಂಡಲದ ಪ್ರಮುಖರಾದ ಎ.ವಿ ತೀರ್ಥರಾಮ,ವೆಂಕಟ್ ದಂಬೆಕೋಡಿ,ಹರೀಶ ಕಂಜಿಪಿಲಿ,ಎಸ್.ಎನ್. ಮನ್ಮಥ,ಕೇಶವ ಭಟ್ ಮುಳಿಯ,ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಮಹಿಳಾ ಪ್ರಮುಖರಾದ ಶುಭದ ರೈ,ಸುರ್ವಣಿನಿ ಪಂಜ,ಪುಷ್ಪವತಿ ಕಳುವಾಜೆ, ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.