Home Uncategorizedವಿಶ್ವ ಪರಿಸರ ದಿನಾಚರಣೆ ಜೂನ್ 5 ರಂದು: ಕಾಣಿಯೂರಿನಲ್ಲಿ ಯುವಕರಿಂದ ಪರಿಸರ ಜಾಗೃತಿ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ ಜೂನ್ 5 ರಂದು: ಕಾಣಿಯೂರಿನಲ್ಲಿ ಯುವಕರಿಂದ ಪರಿಸರ ಜಾಗೃತಿ ಕಾರ್ಯಕ್ರಮ

by anamika

ಕಡಬ:ಪ್ರಕೃತಿಯ ರಕ್ಷಣೆ ಮತ್ತು ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 5 ರಂದು ಕಡಬ ತಾಲೂಕಿನ ಕಾಣಿಯೂರಿನಲ್ಲಿ “ವಿಶ್ವ ಪರಿಸರ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಗಿದೆ.

ಭಾರತ ಸರ್ಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್ ದಕ್ಷಿಣ ಕನ್ನಡ ಹಾಗೂ ನ್ಯಾಷನಲ್ ಯೂತ್ ಕ್ಲೈಮೇಟ್ ಇಂಪ್ಯಾಕ್ಟ್ ಕಮ್ಯೂನಿಟಿ ಇವುಗಳ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ. ಕಾಣಿಯೂರು ಗ್ರಾಮ ಪಂಚಾಯತ್, ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ (ರಿ.) ಕಾಣಿಯೂರು, ಕಣ್ವರ್ಷಿ ಮಹಿಳಾ ಮಂಡಲ (ರಿ.) ಕಾಣಿಯೂರು, ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಕಾಣಿಯೂರು ಹಾಗೂ ಕಾಣಿಯೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದ ವಿವರ
ದಿನಾಂಕ:05 ಜೂನ್ 2026
ಸಮಯ: ಅಪರಾಹ್ನ 2:30 ಕ್ಕೆ
ಸ್ಥಳ:ಸ. ಹಿ. ಪ್ರಾ. ಶಾಲೆ, ಕಾಣಿಯೂರು

ಗಣ್ಯರ ಉಪಸ್ಥಿತಿ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಪರಮೇಶ್ವರ ಅನಿಲಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಲವು ಗಣ್ಯರು ಭಾಗವಹಿಸಲಿದ್ದು, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಿದ್ದಾರೆ..


ಶ್ರೀ ಉಲ್ಲಾಸ್ ಕೆ. ಟಿ. ಕೆ (ಉಪ ನಿರ್ದೇಶಕರು, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ದಕ್ಷಿಣ ಕನ್ನಡ)
ಶ್ರೀಮತಿ ವಿದ್ಯಾರಾಣಿ (ಸಾಮಾಜಿಕ ವಲಯಾರಣ್ಯಾಧಿಕಾರಿ, ಪುತ್ತೂರು)
ಶ್ರೀ ಶ್ರೀಕಾಂತ್ ಬಿರಾವು (ರಾಜ್ಯ ಮುಖ್ಯಸ್ಥರು, ರಾಷ್ಟ್ರೀಯ ಯುವ ಹವಾಮಾನ ಬದಲಾವಣೆ ಸಮಿತಿ, ಕರ್ನಾಟಕ)
ಶ್ರೀ ರಘು ಬಿ. ಎನ್ (ಅಭಿವೃದ್ಧಿ ಅಧಿಕಾರಿ, ಕಾಣಿಯೂರು ಗ್ರಾ. ಪಂ.)
ಶ್ರೀಮತಿ ಶಶಿಕಲಾ (ಮುಖ್ಯಗುರುಗಳು, ಸ. .ಹಿ. ಪ್ರಾ. ಶಾಲೆ ಕಾಣಿಯೂರು)
ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯುವ ಸಮುದಾಯ ಹಾಗೂ ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕಾಣಿಯೂರು ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ, ಪರಿಸರ ಪ್ರೇಮಿಗಳಿಗೆ ಆದರದ ಸುಸ್ವಾಗತವನ್ನು ಕೋರಲಾಗಿದೆ.

You may also like

Leave a Comment