Home HISTORYಕಠಿಣ ಶಿಕ್ಷೆಗಳೇ ಅಪರಾಧ ತಡೆಗೆ ಪರಿಹಾರ?: ಹೈಕೋರ್ಟ್ ನ್ಯಾಯಮೂರ್ತಿ ಆರ್‌. ನಟರಾಜ್‌ ಕಳಕಳಿ

ಕಠಿಣ ಶಿಕ್ಷೆಗಳೇ ಅಪರಾಧ ತಡೆಗೆ ಪರಿಹಾರ?: ಹೈಕೋರ್ಟ್ ನ್ಯಾಯಮೂರ್ತಿ ಆರ್‌. ನಟರಾಜ್‌ ಕಳಕಳಿ

by anamika

ಕಠಿಣ ಶಿಕ್ಷೆಗಳೇ ಅಪರಾಧ ತಡೆಗೆ ಪರಿಹಾರ?: ಹೈಕೋರ್ಟ್ ನ್ಯಾಯಮೂರ್ತಿ ಆರ್‌. ನಟರಾಜ್‌ ಕಳಕಳಿ

ಬೆಂಗಳೂರು: ದೇಶದಲ್ಲಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜಾರಿಯಾಗದ ಕಾರಣ ಕಾನೂನು ತನ್ನ ಪ್ರಭಾವ ಕಳೆದುಕೊಳ್ಳುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್‌. ನಟರಾಜ್‌ ಅಭಿಪ್ರಾಯಪಟ್ಟಿದ್ದಾರೆ. ಮಧ್ಯಪ್ರಾಚ್ಯ ದೇಶಗಳ ಮಾದರಿಯಲ್ಲಿ ಕಠಿಣ ಶಿಕ್ಷೆಗಳಿದ್ದರೆ ಮಾತ್ರ ಜನರು ಕಾನೂನು ಪಾಲನೆಗೆ ಹೆದರುತ್ತಾರೆ ಎಂಬುದಾಗಿ ಅವರು ಮೌಖಿಕವಾಗಿ ಹೇಳಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ತೆಲಂಗಾಣ ಮೂಲದ ಯುವಕನ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವರು ತಮ್ಮ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯ ಭಯ ಕಡಿಮೆಯಾಗಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಕಾನೂನಿನ ಪರಿಣಾಮಕಾರಿ ಜಾರಿ ಹಾಗೂ ಅಪರಾಧಿಗಳಿಗೆ ತ್ವರಿತ ಶಿಕ್ಷೆ ನೀಡುವ ವ್ಯವಸ್ಥೆಯ ಅಗತ್ಯವಿದೆ ಎಂಬ ಸಂದೇಶವನ್ನು ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯದಲ್ಲಿ ಒತ್ತಿ ಹೇಳಿದರು.

You may also like

Leave a Comment