Home Uncategorizedವೈರಲ್ ವಿಡಿಯೋ ತಂದ ದುರಂತ: ಮಹಿಳೆಯಿಂದ ಕಿರುಕುಳದ ಆರೋಪ, ಅವಮಾನ ತಾಳಲಾರದೆ ದೀಪಕ್ ಸಾವು

ವೈರಲ್ ವಿಡಿಯೋ ತಂದ ದುರಂತ: ಮಹಿಳೆಯಿಂದ ಕಿರುಕುಳದ ಆರೋಪ, ಅವಮಾನ ತಾಳಲಾರದೆ ದೀಪಕ್ ಸಾವು

by Editor

ಕೋಝಿಕ್ಕೋಡ್: ಜನನಿಬಿಡ ಬಸ್ಸಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಆರೋಪಿ ದೀಪಕ್ (40) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದ ಈ ವಿಡಿಯೋದಿಂದ ತೀವ್ರ ಮುಜುಗರ ಹಾಗೂ ಸಾಮಾಜಿಕ ಅವಮಾನಕ್ಕೊಳಗಾಗಿದ್ದ ಅವರು ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಮೃತರ ಕುಟುಂಬದವರು “ಕೇವಲ ಪ್ರಚಾರಕ್ಕಾಗಿ ಸುಳ್ಳು ಆರೋಪ ಹೊರಿಸಿ ಮಗನ ಬಲಿ ಪಡೆಯಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ವಿಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿಚಾರಣೆಗೂ ಮೊದಲೇ ನಡೆಯುವ ಇಂತಹ ‘ಡಿಜಿಟಲ್ ವಿಚಾರಣೆ’ಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.

You may also like

Leave a Comment