66
ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ರಂಗದ ದಿಗ್ಗಜ ಆಟಗಾರ್ತಿ ಸೈನಾ ನೆಹ್ವಾಲ್ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ತೀವ್ರವಾದ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲು ಸಾಧ್ಯವಾಗದ ಕಾರಣ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.
2023ರಲ್ಲಿ ತಮ್ಮ ಕೊನೆಯ ಸ್ಪರ್ಧಾತ್ಮಕ ಪಂದ್ಯವಾಡಿದ್ದ ಸೈನಾ, ಭಾರತಕ್ಕೆ ಒಲಿಂಪಿಕ್ ಪದಕ ತಂದುಕೊಟ್ಟ ಮೊದಲ ಬ್ಯಾಡ್ಮಿಂಟನ್ ಪಟು ಎಂಬ ಇತಿಹಾಸ ಬರೆದಿದ್ದರು. ವಿಶ್ವದ ನಂ.1 ಶ್ರೇಯಾಂಕಕ್ಕೇರಿದ್ದ ಅವರು, ತಮ್ಮ ಅಮೋಘ ಆಟದ ಮೂಲಕ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಿದ್ದರು. ಗಾಯದ ನಡುವೆಯೂ ಕಂಬ್ಯಾಕ್ ಮಾಡಲು ಅವರು ನಡೆಸಿದ ಪ್ರಯತ್ನ ಯಶಸ್ವಿಯಾಗದ ಹಿನ್ನೆಲೆಯಲ್ಲಿ, ಈ ವರ್ಷದ ಆರಂಭದಲ್ಲೇ ಅಂಗಳದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಅವರ ನಿವೃತ್ತಿಯಿಂದ ಭಾರತೀಯ ಕ್ರೀಡಾಲೋಕದ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ.