ವ್ಯವಹಾರಿಕ ಜ್ಙಾನಗಳನ್ನು ಅಳವಡಿಸಿಕೊಂಡು ಮುಂದಿನ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಇಂತಹ ಮೆಟ್ರಿಕ್ ಮೇಳಗಳು ಮಹತ್ತರ ಪಾತ್ರ ವಹಿಸುತ್ತದೆ ಎಂದು ಉದ್ಯಮಿ ಚಂದ್ರಶೇಖರ ಬರೆಪ್ಪಾಡಿ ಹೇಳಿದರು. ಅವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರಗತಿ ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ದೇವಪ್ಪರವರು ಮಾತನಾಡಿ, ಶಾಲಾ ಮಕ್ಕಳ ಭವಿಷ್ಯದ ಜೀವನದ ಬೆಳವಣಿಗೆಗೆ ಇಂತಹ ಮೇಳಗಳ ಮೂಲಕ ಪಡೆದ ಅನುಭವಗಳು ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಧನಂಜಯ ಕೇನಾಜೆ, ಶಾಲಾ ಆಡಳಿತ ಸಮಿತಿ ಸದಸ್ಯ ನಾಗೇಶ್ ರೈ ಮಾಳ, ಶಾಲಾ ಟ್ರಸ್ಟಿಗಳಾದ ವೃಂದಾ ಜೆ ರೈ, ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಸಹಾಯಕ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ ಮಾಳ,ಶಿಕ್ಷಕ ವೃಂದದವರು ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮಾಧ್ಯಮ ಮುಖ್ಯಸ್ಥೆ ವಿನಯ ವಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿಯರಾದ ಸವಿತಾ ಕೆ, ಧನ್ಯ ಎಂ.ಎ ಹಾಗೂ ಪೋಷಕ ಬಂಧು ದಿನೇಶ್ ಪೈಕ ಸಹಕರಿಸಿದರು.
*ಮನಸೂರೆಗೊಂಡ ಪ್ರಗತಿ ಜಾತ್ರೆ*
ಪ್ರಗತಿ ಜಾತ್ರೆಯಲ್ಲಿ ಹಲವಾರು ವಿಶೇಷತೆಗಳು, ಮಕ್ಕಳ ವ್ಯಾಪಾರದ ರೀತಿ ಎಲ್ಲರ ಮನಸೂರೆಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯಿತು. ಶಾಲೆಯ ಎದುರು ಗೇಟಿನಿಂದ ಚೆಂಡೆ, ಗೊಂಬೆ ಬಳಗದೊಂದಿಗೆ ಅತಿಥಿ ಗಣ್ಯರನ್ನು ಬರಮಾಡಿಕೊಳ್ಳಲಾಯಿತು. ತೊಟ್ಟಿಲು, ಜಾರುಬಂಡಿ, ತಿರುಗುವ ಕುದುರೆ, ಮನೆಯಲ್ಲೇ ತಯಾರಿಸಿದ ತಿಂಡಿ ತಿನಿಸುಗಳು, ಸೊಪ್ಪು ತರಕಾರಿಗಳು, ಹಣ್ಣುಗಳು, ಚಾಟ್ಸ್, ವಿವಿಧ ಪಾನೀಯಗಳು, ಪೊಟಾಟೋ ಟ್ವಿಸ್ಟರ್, ಕಾರ್ನ್ ಸ್ಟಾಲ್, ಐಸ್ ಕ್ರೀಮ್, ಮಜ್ಜಿಗೆ, ಫ್ಯಾನ್ಸಿ, ಪ್ಲಾಸ್ಟಿಕ್ ವಸ್ತುಗಳು, ನರ್ಸರಿ, ಲಕ್ಕಿ ಗೇಮ್ಸ್, ಅಕ್ಟೇರಿಯಂ, ಆಯುರ್ವೇದಿಕ್ ಉತ್ಪನ್ನಗಳು, ವಸ್ತ್ರ ಮಳಿಗೆ, ವೆಜ್ ಬಿರಿಯಾನಿ, ಸಿನಿಮಾ ಮಂದಿರ ಅದರಲ್ಲೂ ಮುಖ್ಯವಾಗಿ ದೆವ್ವದ ಮನೆ ಭಯಾನಕವಾಗಿ ವಿಶಿಷ್ಟ ರೀತಿಯಲ್ಲಿ ಗ್ರಾಹಕರ ಮನಸೂರೆಗೊಂಡಿತು.