ಸಾಮಾನ್ಯಶುರುವಾದ ಪ್ರೀತಿ… ಹೈಕೋರ್ಟ್ ಪೆರೋಲ್ ನೀಡಿ ಮದುವೆಗೆ ಅವಕಾಶ: ರಾಜಸ್ಥಾನದ ಇಬ್ಬರು ಕುಖ್ಯಾತ ಕೊಲೆಗಡುಕರು ಹಸೆಮಣೆ ಏರಲು ಸಜ್ಜು!
ಅಲ್ವಾರ್/ರಾಜಸ್ಥಾನ: ಸಮಾಜವನ್ನೇ ಬೆಚ್ಚಿಬೀಳಿಸಿದ್ದ ಇಬ್ಬರು ಕುಖ್ಯಾತ ಕೊಲೆ ಪ್ರಕರಣದ ಆರೋಪಿಗಳು ಇದೀಗ ಜೈಲಿನಿಂದ ಹೊರಬಂದು ಮದುವೆಗೆ ಸಿದ್ಧರಾಗಿರುವ ಬೆಳವಣಿಗೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜೈಲಿನಲ್ಲಿಯೇ ಪ್ರೀತಿ ಬೆಳೆಸಿಕೊಂಡಿದ್ದ ಈ ಜೋಡಿ ಈಗ ಕಾನೂನುಬದ್ಧವಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ.
ತಮ್ಮ ಮದುವೆಗಾಗಿ ಪೆರೋಲ್ ನೀಡಬೇಕೆಂದು ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದು, ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ಅಲ್ವಾರ್ ಜಿಲ್ಲೆಯ ಬರೋಡಾಮೇವ್ನಲ್ಲಿ ಮದುವೆ ಮಾಡಿಕೊಳ್ಳಲು 15 ದಿನಗಳ ಪೆರೋಲ್ ಮಂಜೂರು ಮಾಡಿದೆ.
ಈ ಪ್ರಕರಣ ಇದೀಗ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, “ಇಂತಹ ಗಂಭೀರ ಅಪರಾಧ ಹಿನ್ನೆಲೆ ಹೊಂದಿರುವವರಿಗೆ ಮದುವೆಗಾಗಿ ಬಿಡುಗಡೆ ನೀಡುವುದು ಸರಿಯೇ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.
ಒಂದೆಡೆ ಕಾನೂನುಬದ್ಧ ಹಕ್ಕಿನ ಅಡಿಯಲ್ಲಿ ನ್ಯಾಯಾಲಯ ಪೆರೋಲ್ ನೀಡಿರುವುದಾಗಿ ಹೇಳಲಾಗುತ್ತಿದರೆ, ಮತ್ತೊಂದೆಡೆ ಈ ಬೆಳವಣಿಗೆ ಭದ್ರತೆ ಮತ್ತು ಸಮಾಜದ ನೈತಿಕತೆಯ ದೃಷ್ಟಿಯಿಂದ ಚರ್ಚೆಗೆ ಕಾರಣವಾಗಿದೆ.
ಕ್ರಿಮಿನಲ್ ಲೋಕದಲ್ಲೇ ಆರಂಭವಾದ ಇವರ ಬಾಂಧವ್ಯ ಮುಂದೇನು ತಿರುವು ಪಡೆಯಲಿದೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.