105
ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ನಿಗೂಢ ಆತ್ಮಹತ್ಯೆ ಪ್ರಕರಣ ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಪೊಲೀಸರ ಕೈಸೇರಿರುವ ರಾಯ್ ಅವರ ವೈಯಕ್ತಿಕ ಡೈರಿಯಲ್ಲಿ ಸ್ಫೋಟಕ ಮಾಹಿತಿ ಇರುವುದು ಬಹಿರಂಗವಾಗಿದೆ. ಕೇವಲ ಹಣಕಾಸಿನ ವಹಿವಾಟು ಮಾತ್ರವಲ್ಲದೆ, ಬೆಂಗಳೂರಿನ ಪ್ರಭಾವಿ ಶಾಸಕರು ಮತ್ತು ಕೋಲಾರದ ಓರ್ವ ಪ್ರಮುಖ ನಾಯಕನೊಂದಿಗೆ ನಡೆಸಿದ ಕೋಟಿಗಟ್ಟಲೆ ರೂಪಾಯಿಗಳ ಡೀಲ್ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ ಎಂದು ಮೂಲಗಳು ತಿಳಿಸಿವೆ.
ಐಟಿ ದಾಳಿಯ ಸಂದರ್ಭದಲ್ಲಿ ನಡೆದ ಈ ದುರಂತದ ಹಿಂದೆ ಕೇವಲ ಮಾನಸಿಕ ಒತ್ತಡವಿದೆಯೇ ಅಥವಾ ಪ್ರಭಾವಿಗಳ ಬೆದರಿಕೆ ಇತ್ತೇ ಎಂಬ ಶಂಕೆ ವ್ಯಕ್ತವಾಗಿದೆ. ಡೈರಿಯಲ್ಲಿರುವ ‘ಕೋಡ್ ವರ್ಡ್’ಗಳ ಅರ್ಥವನ್ನು ತಿಳಿಯಲು ಪೊಲೀಸರು ಈಗ ತಜ್ಞರ ನೆರವು ಪಡೆಯುತ್ತಿದ್ದಾರೆ.