94
ಮಂಗಳೂರಿನ ನೀರುಮಾರ್ಗ ಸಮೀಪದ ಪಡು ಬೊಂಡಂತಿಲದ ನಾಕೂರು ಮನೆಯಲ್ಲಿ ಫೆಬ್ರವರಿ 13 ಮತ್ತು 14ರಂದು ಅತ್ಯಂತ ಶ್ರದ್ಧಾಭಕ್ತಿಯಿಂದ ದೈವಗಳ ನೇಮೋತ್ಸವ ಮತ್ತು ಕೋಲ ಜರುಗಲಿದೆ. ಫೆಬ್ರವರಿ 13ರ ಶುಕ್ರವಾರದಂದು ನಾಕೂರು ಗ್ರಾಮ ಜಾಗದ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದ್ದು, ಮರುದಿನ ಫೆಬ್ರವರಿ 14ರ ಶನಿವಾರದಂದು ಮನೆಯ ಆರಾಧ್ಯ ದೈವಗಳಾದ ಅಪ್ಪೆ ಮಂತ್ರದೇವತೆ ಹಾಗೂ ಸ್ವಾಮಿ ಕೊರಗಜ್ಜ ದೈವದ ಕೋಲವು ವಿಜೃಂಭಣೆಯಿಂದ ಜರುಗಲಿದೆ.
ಗಾಯತ್ರಿ ನಿಲಯದ ಈ ಪುಣ್ಯಕ್ಷೇತ್ರದಲ್ಲಿ ನಡೆಯುವ ದೈವಗಳ ಸೇವೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಬೇಕೆಂದು ನೂತನ್ ಜಿ. ಸಾಲಿಯಾನ್, ಗಂಗಾಧರ್ ಎಲ್. ಪೂಜಾರಿ ಮತ್ತು ಕುಟುಂಬಸ್ಥರು ವಿನಂತಿಸಿದ್ದಾರೆ. ವಿಶೇಷವಾಗಿ ಎರಡೂ ದಿನಗಳಂದು ರಾತ್ರಿ 8:30 ರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.