Home ಶಿಕ್ಷಣಸುಳ್ಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೈ.ಎಸ್. ಹರಗಿ ನೇಮಕ

ಸುಳ್ಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೈ.ಎಸ್. ಹರಗಿ ನೇಮಕ

by Editor
ಸುಳ್ಯ: ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ (BEO) ಯಮನೂರಪ್ಪ ಸಿದ್ಧಪ್ಪ ಹರಗಿ (ವೈ.ಎಸ್. ಹರಗಿ) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೂಲತಃ ಮೈಸೂರು ಜಿಲ್ಲೆಯವರಾದ ಇವರು, ಈ ಹಿಂದೆ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವರ್ಗಾವಣೆ ನಿಯಮದಂತೆ ಇದೀಗ ಸುಳ್ಯಕ್ಕೆ ಇವರನ್ನು ನಿಯೋಜಿಸಲಾಗಿದೆ. ಫೆಬ್ರವರಿ 2ರಂದು ಅವರು ಸುಳ್ಯಕ್ಕೆ ಆಗಮಿಸಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರು ಭಾಗದವರಾದ ಹರಗಿ ಅವರು ಶಹಪೂರದಲ್ಲಿ ಉತ್ತಮ ಆಡಳಿತಾತ್ಮಕ ಅನುಭವ ಹೊಂದಿದ್ದು, ಇದೀಗ ಕರಾವಳಿ ಭಾಗದ ಶಿಕ್ಷಣ ವ್ಯವಸ್ಥೆಯನ್ನು ಮುನ್ನಡೆಸಲಿದ್ದಾರೆ.ಇವರು ವೈ.ಎಸ್. ಹರಗಿ ಅವರು ಕನ್ನಡದ ಪ್ರಮುಖ ಕಾದಂಬರಿಕಾರ ಮತ್ತು ಕಥೆಗಾರರಾಗಿದ್ದು, ರೋಣ ತಾಲ್ಲೂಕಿನ ಹುಲ್ಲೂರಿನವರು. ಇವರು 1999ರಿಂದ ಕೆ.ಪಿ.ಎಸ್.ಸಿ ಮೂಲಕ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪ್ರಸಿದ್ಧ ಕಾದಂಬರಿ ‘ಉರಿವ ಜಲ’ಕ್ಕೆ 2014ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಇವರ ಪ್ರಮುಖ ಕೃತಿಗಳ ಉರಿವ ಜಲ, ಕೆಂಡದ ನೆರಳು (ಕಾದಂಬರಿಗಳು)ಇವರ ಪ್ರಮುಖ ಕೃತಿಗಳಾಗಿದೆ. 2014ರಲ್ಲಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ನಂಜನಗೂಡಿನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಸಾಹಿತ್ಯವು ಮುಖ್ಯವಾಗಿ ಗ್ರಾಮೀಣ ಬದುಕಿನ ವಾಸ್ತವತೆಗಳನ್ನು ಚಿತ್ರಿಸುತ್ತದೆ.

You may also like

Leave a Comment