Home ಅರೋಗ್ಯಜನಾಕ್ರೋಶಕ್ಕೆ ಮಣಿದ ಸಾರಿಗೆ ಇಲಾಖೆ: ಬಸ್‌ಗಳ ಮೇಲಿನ ತಂಬಾಕು ಜಾಹೀರಾತು ತೆರವಿಗೆ ಆದೇಶ

ಜನಾಕ್ರೋಶಕ್ಕೆ ಮಣಿದ ಸಾರಿಗೆ ಇಲಾಖೆ: ಬಸ್‌ಗಳ ಮೇಲಿನ ತಂಬಾಕು ಜಾಹೀರಾತು ತೆರವಿಗೆ ಆದೇಶ

by Editor

ರಾಜ್ಯದ ಸರ್ಕಾರಿ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನೇರವಾಗಿ ಬಸ್‌ ನಿಲ್ದಾಣಗಳಲ್ಲಿ ಪೋಸ್ಟರ್‌ಗಳನ್ನು ಕಿತ್ತೆಸೆಯುವ ಮೂಲಕ ಜನರು ತಮ್ಮ ಪ್ರತಿರೋಧ ದಾಖಲಿಸಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ರೀತಿಯ ಪ್ರಚಾರ ಕೂಡಲೇ ನಿಲ್ಲಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ಈ ಆಂದೋಲನಕ್ಕೆ ಮಣಿದಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮೇಲಿರುವ ಎಲ್ಲಾ ತಂಬಾಕು ಜಾಹೀರಾತುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಎಂಡಿಗಳಿಗೆ ಸೂಚಿಸಿದ್ದಾರೆ. ಸುಮಾರು 2 ಸಾವಿರ ಬಸ್‌ಗಳಲ್ಲಿ ಅಳವಡಿಸಲಾದ ಪೋಸ್ಟರ್‌ಗಳನ್ನು ಮುಂದಿನ 15 ದಿನಗಳ ಒಳಗಾಗಿ ಸಂಪೂರ್ಣವಾಗಿ ತೆಗೆದುಹಾಕಲು ಗಡುವು ನೀಡಲಾಗಿದೆ.

ವಾರ್ಷಿಕವಾಗಿ ಈ ಜಾಹೀರಾತುಗಳಿಂದ ಸುಮಾರು 60 ಕೋಟಿ ರೂಪಾಯಿ ಆದಾಯ ಬರುತ್ತಿದ್ದರೂ, ಸರ್ಕಾರದ ಬೊಕ್ಕಸಕ್ಕಿಂತ ಸಮಾಜದ ಸ್ವಾಸ್ಥ್ಯ ಮತ್ತು ಯುವಜನತೆಯ ಆರೋಗ್ಯ ಮುಖ್ಯ ಎಂದು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾಹೀರಾತು ನೀಡಿದ ಕಂಪನಿಗಳೂ ಸಹ ತೆರವಿಗೆ ಸಹಕರಿಸುವುದಾಗಿ ಒಪ್ಪಿಕೊಂಡಿದ್ದು, ಆಯಾ ಡಿಪೋ ಮ್ಯಾನೇಜರ್‌ಗಳು ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.

You may also like

Leave a Comment