ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆಯ ವಸತಿ ನಿಲಯದ ವಾರ್ಷಿಕೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು . ಕಾರ್ಯಕ್ರಮವು ಸಂಜೆ ಆರು ಗಂಟೆಗೆ ಪ್ರಾರಂಭವಾಯಿತು.
ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬಿರ ಇವರು ಶ್ರೀ ಕೃಷ್ಣನ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಅಧ್ಯಕ್ಷತೆ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಶಿಸ್ತು ಸಂಯಮ ಜೀವನದ ಅವಿಭಾಜ್ಯ ಅಂಗ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ ಹಾಗೂ ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯರು ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಮಾಡಿ ಶುಭ ಹಾರೈಸಿದರು.
ಶಾಲಾ ಮುಖ್ಯ ಗುರುಗಳಾದ ಪ್ರಸನ್ನ ಕೆ ಇವರು ವಿದ್ಯಾರ್ಥಿಗಳು ಕ್ರೀಯಾಶೀಲತೆಗೆ ಹಾಗೂ ಸೃಜನಶೀಲತೆಗೆ ಒತ್ತುಕೊಡಬೇಕೆಂದು ಹೇಳಿದರು. ನಿಲಯ ಪಾಲಕರಾದ ಶ್ರೀ ಹರೀಶ್ ಕೆ ಪ್ರಾಸ್ತಾವಿಕ ಮಾತನ್ನು ಆಡಿ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿಯಾದ ಶಿಬಾನಿ 10ನೇ ತರಗತಿ ನಡೆಸಿಕೊಟ್ಟರು ವಿದ್ಯಾರ್ಥಿ ತರುಣ್ ಗೌಡ ದೇವರ ಸ್ತುತಿಯನ್ನು ಮಾಡಿದರು. ವಸತಿ ನಿಲಯದ ನಾಯಕನಾದ ಕುಶಾಲ್ ಎಂ ವಿ , ಪ್ರಕೃತಿ , ತರುಣ್ ಗೌಡ ತಮ್ಮ ವಸತಿ ನಿಲಯದ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ನಿಲಯ ಪಾಲಕಿಯಾದ ಕು. ಸುದೀಕ್ಷಾ ಇವರು ನೆರವೇರಿಸಿ ಕೊಟ್ಟರು. ನಿಲಯ ಪಾಲಕರದ ಶ್ರೀ ಭರತ್ ರಾಜ್, ಅಭಿಷೇಕ್, ವಸಿಷ್ಠ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ನಡೆಯಿತು ಈ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು 10ನೇ ತರಗತಿ ವಿದ್ಯಾರ್ಥಿ ಅಶ್ವಿಕ್ ವಾಸು ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಪೋಷಕರು, ಶಿಕ್ಷಕರು, ಶಿಕ್ಷಕೇತರ ಬಂಧುಗಳು ಆಗಮಿಸಿದ್ದರು . ಇವರೆಲ್ಲರೂ ಈ ಕಾರ್ಯಕ್ರಮದ ಯಶಸ್ವಿಗೆ ಕಾರಣಿಕರ್ತರಾದರು. ವಿದ್ಯಾರ್ಥಿಗಳೆಲ್ಲಾ ಸಡಗರ- ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.