ನ್ಯಾಯಕ್ಕಾಗಿ ಜೀವ ಪಣಕ್ಕಿಟ್ಟ ವೈದ್ಯೆ: ಡಾ. ಆಯ್ದಾ ರೋಸ್ತಾಮಿ ಹೃದಯವಿದ್ರಾವಕ ಕಥೆ
ಅದೊಂದು ದಿನಾ…
ಇರಾನ್ ದೇಶದಲ್ಲಿ ಪ್ರತಿಭಟನೆಗಳ ಕಿಡಿ ಹೊತ್ತಿಕೊಂಡಿತ್ತು. ರಸ್ತೆಗಳಲ್ಲಿ ಘೋಷಣೆಗಳು, ಎಲ್ಲೆಡೆ ಆತಂಕ, ಗೊಂದಲ. ಭದ್ರತಾ ಪಡೆಗಳ ಕ್ರಮದಿಂದ ಹಲವರು ಗಾಯಗೊಂಡಿದ್ದರು. ಆದರೆ ಗಾಯಗೊಂಡವರ ಮುಂದೆ ಮತ್ತೊಂದು ಭಯಾನಕ ಸತ್ಯ ನಿಂತಿತ್ತು — ಆಸ್ಪತ್ರೆಗಳಿಗೆ ಹೋದರೆ ಬಂಧನ, ಹಿಂಸೆ ಅಥವಾ ಕಾಣೆಯಾಗುವ ಭೀತಿ.
ಆ ಸಮಯದಲ್ಲಿ ಕೆಲವರು ಮಾತ್ರ ಮಾನವೀಯತೆಯನ್ನು ತೋರಿಸುವ ಸಂಧರ್ಭದಲ್ಲಿ ತಹರಾನ್ ನಗರದ ಎಕ್ಬತಾನ್ ಪ್ರದೇಶದಲ್ಲಿ 36 ವರ್ಷದ ಈ ವೈದ್ಯೆ, ತಮ್ಮ ಸುರಕ್ಷತೆಯ ಬಗ್ಗೆ ಯೋಚಿಸದೇ ಗಾಯಗೊಂಡ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದರು. ರಾತ್ರಿ ಹೊತ್ತು, ಗುಪ್ತ ಸ್ಥಳಗಳಲ್ಲಿ, ಗಾಯಗೊಂಡವರನ್ನು ಉಳಿಸಲು ಅವರು ಶ್ರಮಿಸುತ್ತಿದ್ದರು. ಅವರಿಗೆ ಅದು ಕೇವಲ ವೈದ್ಯಕೀಯ ಕರ್ತವ್ಯವಲ್ಲ; ಅದು ಮಾನವೀಯತೆ ಆಗಿತ್ತು ಆ ಸಂಧರ್ಭ..
ಒಂದು ದಿನ, ಆ ಧೈರ್ಯಶಾಲಿ ವೈದ್ಯೆ ಏಕಾಏಕಿ ಕಾಣೆಯಾಗಿದ್ದರು. ಅವರ ಕುಟುಂಬದವರು ಆತಂಕದಿಂದ ಎಲ್ಲೆಡೆ ಹುಡುಕಿದರು. ದಿನಗಳು ಕಳೆಯುತ್ತಿದ್ದಂತೆ ಭಯ ಹೆಚ್ಚುತ್ತಿತ್ತು.ವ್ಯಕ್ತಿ ಸಿಗಲೇ ಇಲ್ಲ ,ಆದರೆ ಕೆಲವು ದಿನಗಳ ನಂತರ, ದುಃಖಕರ ಸುದ್ದಿ ಹೊರಬಂದಿತು. ಡಾ. ಆಯ್ದಾ ರೋಸ್ತಾಮಿ ಅವರ ಮೃತದೇಹ ಪತ್ತೆಯಾಯಿತು,ಆಕೆಯನ್ನು ಅರೆಸ್ಟ್ ಮಾಡಿದ ಇರಾನ್ ಸರ್ಕಾರ ಆಕೆಯನ್ನು ಭೀಕರವಾಗಿ ಕೊಂದಿತ್ತು. ಭೀಕರತೆ ಎಷ್ಟಿತ್ತು ಅಂದರೆ – ದೇಹವೆಲ್ಲಾ ಸಂಪೂರ್ಣವಾಗಿ ಫ್ರಾಕ್ಚರ್ ಆಗಿತ್ತು. ಮೂಗು, ಹೆಗಲು ಮುರಿದುಹೋಗಿತ್ತು. ಕಣ್ಣು ಹೊರಬಂದಿತ್ತು., ಆದರೆ ಅವರ ಸಾವಿನ ನಿಜವಾದ ಕಾರಣವನ್ನು ವೈದ್ಯಕೀಯ ಅಧಿಕಾರಿಗಳು ಬಹಿರಂಗಪಡಿಸಲಿಲ್ಲ. ಈ ಮೌನವು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿತು.
ಕುಟುಂಬದವರು ಮತ್ತು ಹಲವರು ಅವರ ಮರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಗಾಯಗೊಂಡವರನ್ನು ಉಳಿಸಲು ಜೀವ ಪಣಕ್ಕಿಟ್ಟ ವೈದ್ಯೆಯ ಅಂತ್ಯ ಹೀಗಾಗಿರಬಹುದೇ ಎಂಬ ಪ್ರಶ್ನೆ ದೇಶದಾದ್ಯಂತ ಚರ್ಚೆಗೆ ಕಾರಣವಾಯಿತು.1986ರ ಜುಲೈ 16ರಂದು ಜನಿಸಿದ ಡಾ. ಆಯ್ದಾ ರೋಸ್ತಾಮಿ ಗೆ ಆಗ 36 ವರ್ಷ, ಆಕೆ ಮಾಡಿದ ತಪ್ಪು ಇಷ್ಟೇ ಇರಾನಿನ ಕ್ರೂರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರು ಗಾಯಗೊಂಡಾಗ ಅವರಿಗೆ ಈ ಡಾಕ್ಟರ್ ಧೈರ್ಯದಿಂದ ಚಿಕಿತ್ಸೆ ನೀಡಿದ್ದರು…..ನ್ಯಾಯಕ್ಕಾಗಿ ಮತ್ತು ಮಾನವೀಯತೆಗಾಗಿ ಹೋರಾಡಿದ ಧೈರ್ಯಶಾಲಿ ವೈದ್ಯೆಯ ನೆನಪು ಇಂದಿಗೂ ಅಜರಾಮರ