ಹನುಮಗಿರಿ ಬ್ರಹ್ಮ ಕಲಶೋತ್ಸವದ ಅಂಗವಾಗಿ ಶ್ರೀರಾಮ ಜ್ಯೋತಿ ಯಾತ್ರೆ: ಕಾಣಿಯೂರು ಸಮಿತಿ ರಚನೆ

ಗಣೇಶ್ ಉದನಡ್ಕ ಅಧ್ಯಕ್ಷರು

ಜಯಂತ ಅಬೀರ ಕಾರ್ಯದರ್ಶಿ
ಹನುಮಗಿರಿ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಎಪ್ರಿಲ್ 9ರಿಂದ 12ರ ವರೆಗೆ ನಡೆಯುವ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಶ್ರೀ ರಾಮ ಜ್ಯೋತಿ ಯಾತ್ರೆ ಹಾಗೂ ಶ್ರೀ ರಾಮ ತಾರಕಜಪ ದೀಕ್ಷೆಯ ಸಲುವಾಗಿ ಕಾಣಿಯೂರು, ಚಾರ್ವಾಕ, ದೋಳ್ಪಾಡಿ, ಬೆಳಂದೂರು,ಕಾಯ್ಮಣ ಗ್ರಾಮಗಳನ್ನು ಒಳಗೊಂಡ ಕಾಣಿಯೂರು ಸಮಿತಿಯನ್ನು ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಅಚ್ಚುತ ಮೂಡತ್ತಾಯ, ಬ್ರಹ್ಮ ಕಲಶೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ನಹುಷ ಭಟ್ , ಸಮಿತಿಯ ಪದಾಧಿಕಾರಿ ರಾಕೇಶ್ ರೈ ಕೆಡೆಂಜಿ, ಹರಿಪ್ರಸಾದ್ ಈಶ್ವರ ಮಂಗಳ ಇವರುಗಳ ಉಪಸ್ಥಿತಿಯಲ್ಲಿ ರಚನೆ ಮಾಡಲಾಯಿತು.ಸಮಿತಿಯ ಅಧ್ಯಕ್ಷರಾಗಿ ಕಾಣಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಬೆಳಂದೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಜಯಂತ ಅಬೀರ,ಜಪಯಜ್ಙ ಸಮಿತಿಯ ಸಂಚಾಲಕರಾಗಿ ಚಿದಾನಂದ ಉಪಾಧ್ಯಾಯ ಕಲ್ಪಡ,ಸಹ ಸಂಚಾಲಕರುಗಳಾಗಿ ಲಕ್ಷಣ ಗೌಡ ಮುಗರಂಜ, ರಮೇಶ್ ಮಾದೋಡಿ, ಮೋಹನ ಅಗಳಿ , ಬಾಲಕೃಷ್ಣ ಇಡ್ಯಡ್ಕ, ಧನಂಜಯ ಕೇನಾಜೆ,ರಥ ಯಾತ್ರೆಯ ಸಂಚಾಲಕರಾಗಿ ಉದಯ ರೈ ಮಾದೋಡಿ,ಸಹ ಸಂಚಾಲಕರುಗಳಾಗಿ ಶ್ರೀನಿಧಿ ಅಚಾರ್, ಪ್ರಶಾಂತ್ ಭಟ್ ಕಟ್ಟತ್ತಾರು,ಲಕ್ಷೋತ್ತರ ನಾರಿಕೇಳ ಸಮರ್ಪಣಾ ಸಮಿತಿಯ ಸಂಚಾಲಕರಾಗಿ ಪದ್ಮಯ್ಯ ಗೌಡ ಅನಿಲ,ಸಹ ಸಂಚಾಲಕರುಗಳಾಗಿ ವಿಶ್ವನಾಥ ದೇವಿನಗರ, ಕೇಶವ ಕಟ್ಟತ್ತಾರು,ಭವಿತ್ ಕೂರೇಲು, ವಿಜೇತ್ ಮುಂಡಾಳ, ಅನಿಲ್ ಕೂಂಕ್ಯ, ಭಜನಾ ಸಮಿತಿಯ ಸಂಚಾಲಕರಾಗಿ ಪರಮೇಶ್ವರ ಅನಿಲ, ಮಹಿಳಾ ಸಮಿತಿಯ ಸಂಚಾಲಕರಾಗಿ ದೇವಕಿ ಕಟ್ಟತ್ತಾರು,ಸಹ ಸಂಚಾಲಕರಾಗಿ ಪಾರ್ವತಿ ಕಾಣಿಯೂರು, ಸಾಮಾಜಿಕ ಜಾಲತಾಣ ಸಮಿತಿಯ ಸಂಚಾಲಕರಾಗಿ ಸುರೇಶ್ ಓಡಬಾಯಿ ಇವರುಗಳನ್ನು ಅಯ್ಕೆ ಮಾಡಲಾಯಿತು.