ಯಶ್‌ಗಿಲ್ಲ ಗಡ್ಡ, ನಿಂತೋಯ್ತು ರಾಮಾಯಣ..!
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ ಪಾರ್ಟ್-2’ ಚಿತ್ರದ ಚಿತ್ರೀಕರಣ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ ಎಂಬ ಮಾಹಿತಿ ಸಿನಿ ವಲಯದಲ್ಲಿ ಹರಿದಾಡುತ್ತಿದೆ. ಇದರ ಹಿಂದೆ ಇರುವ ಪ್ರಮುಖ ಕಾರಣ ಯಶ್ ಅವರ ಲುಕ್ ಎನ್ನಲಾಗುತ್ತಿದೆ.
ಪ್ರಸ್ತುತ ಯಶ್ ತಮ್ಮ ಮತ್ತೊಂದು ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಆಗಿರುವ ‘ಟಾಕ್ಸಿಕ್’ ಸಿನಿಮಾಗಾಗಿ ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ‘ರಾಮಾಯಣ ಪಾರ್ಟ್-2’ ಚಿತ್ರದಲ್ಲಿ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆ ಪಾತ್ರಕ್ಕೆ ದೀರ್ಘ ಗಡ್ಡ ಮತ್ತು ಗಂಭೀರ ಲುಕ್ ಅಗತ್ಯವಾಗಿದೆ.
ಮೂಲಗಳ ಪ್ರಕಾರ, ಯಶ್ ಮತ್ತೆ ಹಿಂದಿನಂತೆಯೇ ಉದ್ದನೆಯ ಗಡ್ಡದ ಲುಕ್‌ಗೆ ಮರಳಲು ಸುಮಾರು ಮೂರು ರಿಂದ ನಾಲ್ಕು ತಿಂಗಳುಗಳ ಕಾಲ ಬೇಕಾಗಬಹುದು. ಇದೇ ಕಾರಣದಿಂದ ಚಿತ್ರತಂಡ ಚಿತ್ರೀಕರಣವನ್ನು ಮುಂದೂಡಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ಯಶ್ ಅವರ ಗಡ್ಡದ ಸ್ಟೈಲ್ ಈಗಾಗಲೇ ಕೆಜಿಎಫ್ ಸಿನಿಮಾದ ನಂತರ ವಿಶೇಷ ಟ್ರೆಂಡ್ ಆಗಿದೆ. ಆ ಲುಕ್ ಸಿನಿ ಪ್ರೇಕ್ಷಕರ ಮೇಲೆ ಭಾರೀ ಪ್ರಭಾವ ಬೀರಿದ್ದು, ಯಶ್ ಅವರ ವ್ಯಕ್ತಿತ್ವದ ಪ್ರಮುಖ ಭಾಗವಾಗಿಯೂ ಪರಿಣಮಿಸಿದೆ. ಇದೇ ಕಾರಣಕ್ಕೆ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಯಶ್ ಅವರ ಗಡ್ಡದ ಲುಕ್‌ನನ್ನೇ ತಮ್ಮ ಸಿನಿಮಾಗಳಲ್ಲಿ ಬಳಸಲು ಇಷ್ಟಪಡುತ್ತಾರೆ.
ಈ ಹಿನ್ನೆಲೆದಲ್ಲಿ, ಯಶ್ ಮತ್ತೆ ತಮ್ಮ ಹಳೆಯ ಗಡ್ಡದ ಲುಕ್‌ಗೆ ಮರಳಿದ ನಂತರವೇ ‘ರಾಮಾಯಣ ಪಾರ್ಟ್-2’ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಸಿನಿ ವಲಯದ ವರದಿಗಳು ಸೂಚಿಸುತ್ತಿವೆ.