142
ಸಹಕಾರ ಸಂಘದ ಉದ್ಯೋಗಿಯಿಂದ ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ: ಲೇಖಾಲತಾಗೆ ಚಿನ್ನದ ಪ್ರಶಸ್ತಿ
ಕೃಷಿವಿಸ್ತರಣಾ ಸೇವೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಶಸ್ತಿ ಪಡೆದ ಲೇಖಾಲತಾ ಮೆದು
ಪುತ್ತೂರು : ಕೃಷಿ ವಿಶ್ವವಿದ್ಯಾಲಯ ಜಿಕೆ ವಿಕೆ ಮಂಗಳೂರು, ರಾಷ್ಟ್ರೀಯ ವಿಸ್ತಾರಣಾ ನಿರ್ವಹಣಾ ಸಂಸ್ಥೆ ಹೈದರಾಬಾದ್ ಮತ್ತು ಕೃಷಿ ಇಲಾಖೆ ದ.ಕ, ಜಿಲ್ಲೆ ಏರ್ಪಡಿಸಿದ 2023-24 ನೇ ಸಾಲಿನ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ವಿಷಯದಲ್ಲಿ ಕಡಬ ತಾಲೂಕು ಸವಣೂರಿನ ಲೇಖಾಲತಾ ಮೆದು ಅವರು ಚಿನ್ನದ ಪದಕದೊಂದಿಗೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಲೇಖಾಲತಾ ಮೆದು ಅವರು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳಂದೂರು ಕಛೇರಿಯಲ್ಲಿ ಗುಮಸ್ತೆಯಾಗಿದ್ದು, ಇವರು ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಅವರ ಪತ್ನಿ.