Home HISTORYವೈರಲ್ ಆಡಿಯೋಗೆ ಬ್ರೇಕ್ ಹಾಕಲು ರಶ್ಮಿಕಾ ಎಚ್ಚರಿಕೆ: “24 ಗಂಟೆಯಲ್ಲಿ ಡಿಲೀಟ್ ಮಾಡಿ, ಇಲ್ಲಾಂದ್ರೆ ಕೇಸ್!”

ವೈರಲ್ ಆಡಿಯೋಗೆ ಬ್ರೇಕ್ ಹಾಕಲು ರಶ್ಮಿಕಾ ಎಚ್ಚರಿಕೆ: “24 ಗಂಟೆಯಲ್ಲಿ ಡಿಲೀಟ್ ಮಾಡಿ, ಇಲ್ಲಾಂದ್ರೆ ಕೇಸ್!”

Rashmika warns to stop the viral audio: ‘Delete it within 24 hours, otherwise a case will be filed!

by anamika

ವೈರಲ್ ಆಡಿಯೋಗೆ ಬ್ರೇಕ್ ಹಾಕಲು ರಶ್ಮಿಕಾ ಎಚ್ಚರಿಕೆ: “24 ಗಂಟೆಯಲ್ಲಿ ಡಿಲೀಟ್ ಮಾಡಿ, ಇಲ್ಲಾಂದ್ರೆ ಕೇಸ್!”

ಬೆಂಗಳೂರು: ನಟಿ Rashmika Mandanna ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವೈರಲ್ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹಲವು ವರ್ಷಗಳ ಹಿಂದಿನದ್ದೆಂದು ಹೇಳಲಾಗುತ್ತಿರುವ ಆಡಿಯೋವನ್ನು ಕೆಲವು ಮಂದಿ ಮತ್ತೆ ವೈರಲ್ ಮಾಡಿರುವ ಹಿನ್ನೆಲೆ, ಅದನ್ನು ತಕ್ಷಣ ಡಿಲೀಟ್ ಮಾಡಬೇಕೆಂದು ಅವರು ಸೂಚಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ, ರಶ್ಮಿಕಾ ಅವರ ತಾಯಿಯದ್ದು ಎಂದು ಹೇಳಲಾಗುತ್ತಿರುವ ಒಂದು ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಆಡಿಯೋದಲ್ಲಿ ನಟ Rakshit Shetty ಕುರಿತು ಮಾತುಕತೆ ನಡೆದಿರುವುದಾಗಿ ಹೇಳಲಾಗುತ್ತಿದ್ದು, ಇದರಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಮಂದಣ್ಣ, ಕಳೆದ ಎಂಟು ವರ್ಷಗಳಿಂದ ತಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಹೇಳಿದ್ದಾರೆ. “ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿ, ವೀವ್ಸ್ ಮತ್ತು ಲೈಕ್ಸ್‌ಗಾಗಿ ದ್ವೇಷವನ್ನು ಹರಡಲಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಟೀಕೆ ಸಹಜವೆಂದು ನಾನು ಇದುವರೆಗೆ ಮೌನವಾಗಿದ್ದೆ. ಆದರೆ ಕಳೆದ 24 ಗಂಟೆಗಳಲ್ಲಿ ನಡೆದ ಘಟನೆ ಮಿತಿಯನ್ನು ಮೀರಿದೆ,” ಎಂದು ಅವರು ತಿಳಿಸಿದ್ದಾರೆ.

ಇನ್ನೂ ಅವರು, “ಎಂಟು ವರ್ಷಗಳ ಹಳೆಯ ಆಡಿಯೋವನ್ನು ಅನುಮತಿ ಇಲ್ಲದೆ ರೆಕಾರ್ಡ್ ಮಾಡಿ ಈಗ ವೈರಲ್ ಮಾಡಲಾಗಿದೆ. ನನ್ನ ಖಾಸಗಿ ಜೀವನದ ಇತ್ತೀಚಿನ ಘಟನೆಗಳಿಗೆ ಕಾಕತಾಳೀಯವಾಗಿ ಹೊಸ ವಿವಾದ ಸೃಷ್ಟಿಸಲು ಇದನ್ನು ಬಳಸಲಾಗುತ್ತಿದೆ. ಇದರಿಂದ ನನ್ನ ಕುಟುಂಬದವರನ್ನೂ ಈ ವಿಚಾರಕ್ಕೆ ಎಳೆದು ತರಲಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯಿಂದ ತಮ್ಮ ಖಾಸಗಿತನಕ್ಕೆ ಧಕ್ಕೆ ಆಗಿದ್ದು, ತಪ್ಪು ಮಾಹಿತಿ ಹರಡಿಸಿ ಮಾನಹಾನಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. “ನಾನು ನನ್ನ ಜೀವನದಲ್ಲಿ ಮುಂದೆ ಸಾಗಿದ್ದೇನೆ. ಆದರೆ ಕೆಲವರು ಇತರರ ನೆಮ್ಮದಿಯನ್ನು ಕೆಡಿಸಿ ದ್ವೇಷ ಮತ್ತು ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ರಶ್ಮಿಕಾ ತಿಳಿಸಿದ್ದಾರೆ.

ವೈರಲ್ ಮಾಡುತ್ತಿರುವವರನ್ನು ಉದ್ದೇಶಿಸಿ ಅವರು, “ಈ ಆಡಿಯೋವನ್ನು ಕೂಡಲೇ ಡಿಲೀಟ್ ಮಾಡಿ. ಅದಕ್ಕೆ 24 ಗಂಟೆಗಳ ಕಾಲಾವಕಾಶ ನೀಡಲಾಗುತ್ತಿದೆ. ಅದನ್ನು ಪಾಲಿಸದಿದ್ದರೆ ನಾಳೆಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಲೀಗಲ್ ನೋಟಿಸ್ ಕಳುಹಿಸಲಾಗುತ್ತದೆ,” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ವಿಷಯವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದು ಗಮನಾರ್ಹವಾಗಿದೆ.

You may also like

Leave a Comment