Home HISTORYಕಾಣಿಯೂರು ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ , ಮೃತ್ಯುಂಜಯ ಹೋಮ ಮುಷ್ಟಿ ಕಾಣಿಕೆ 

ಕಾಣಿಯೂರು ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ , ಮೃತ್ಯುಂಜಯ ಹೋಮ ಮುಷ್ಟಿ ಕಾಣಿಕೆ 

by anamika

ಕಾಣಿಯೂರು ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ , ಮೃತ್ಯುಂಜಯ ಹೋಮ ಮುಷ್ಟಿ ಕಾಣಿಕೆ 

ಕಡಬ ತಾಲೂಕು ಕಾಣಿಯೂರು ಶ್ರೀ ಜಗದ್ಗುರು ಶ್ರೀ ಮನ್ಮಾಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಮಠ ಶ್ರೀ ಕಾಣಿಯೂರು ಮಠದಲ್ಲಿ ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ , ಶ್ರೀ ದೇವರಿಗೆ ಮುಷ್ಟಿ ಕಾಣಿಕೆ ಸಮರ್ಪಣೆ ಹಾಗೂ ಮಹಾ ಮೃತ್ಯುಂಜಯ ಹೋಮ ನಡೆಯಿತು.

ಬೆಳಿಗ್ಗೆ ನೃಸಿಂಹ ಹೋಮ ಸಹಿತ ವಾಯು ಸ್ತುತಿ ಹೋಮ, ದೇವರಿಗೆ ನವಕ ಕಲಶಾಭಿಷೇಕ, ದೇವರಿಗೆ ಪ್ರಸನ್ನ ಪೂಜೆ

12 ಕಾಯಿ ಗಣಹೋಮ, ದುರ್ಗಾ ಹೋಮ, ಆಶ್ಲೇಷಾ ಬಲಿ, ಚಾವಡಿ ದೈವಗಳ ತಂಬಿಲ ನಂತರ ಮಹಾ ಮೃತ್ಯುಂಜಯ ಹೋಮ ನಡೆಯಿತು ಸಂಜೆ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಮಠದ ವತಿಯಿಂದ ಮತ್ತು ಮಠದ ಕೂಡುಕಟ್ಟಿನವರಾದ ಕಾಣಿಯೂರು, ಅಬೀರ, ಕಂಡೂರು,ಮಾದೋಡಿ,ಕಲ್ಪಡದವರಿಂದ ಶ್ರೀ ದೇವರಿಗೆ ಮುಷ್ಟಿ ಕಾಣಿಕೆ ಸಮರ್ಪಣೆ ನಡೆಯಿತು.ಸ್ವಾಮೀಜಿಯವರು ಮುಷ್ಟಿ ಕಾಣಿಕೆ ಸಮರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.ನಂತರ

ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ತಂಡದ ನೇತೃತ್ವದ ಮಕ್ಕಳ ಯಕ್ಷಗಾನ ತಂಡದಿಂದ ಸುದರ್ಶನ ವಿಜಯ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಅಚಾರ್, ಅರ್ಚಕರಾದ ವಿಶ್ವ ಮೂರ್ತಿ ಬಡಿಕ್ಕಿಲ್ಲಾಯ, ಸುಬ್ರಹ್ಮಣ್ಯ ಉಪಾಧ್ಯಾಯ, ಪ್ರಸಾದ್ ಬೈಪಾಡಿತ್ತಾಯ, ಕಾಣಿಯೂರು ಮಠದ ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು,ಕೂಡುಕಟ್ಟಿನವರು, ಭಕ್ತಾದಿಗಳು ಉಪಸ್ಥಿತರಿದ್ದರು.

You may also like

Leave a Comment