Home HISTORY125 ಲಕ್ಷ ವೆಚ್ಚದಲ್ಲಿ ಕೆದ್ದೆಟ್ಟೊ ಕೆರೆಯ ಅಭಿವೃದ್ಧಿಗೆ ಗುದ್ದಲಿಪೂಜೆ:ಭಾಗೀರಥಿ ಮುರುಳ್ಯ

125 ಲಕ್ಷ ವೆಚ್ಚದಲ್ಲಿ ಕೆದ್ದೆಟ್ಟೊ ಕೆರೆಯ ಅಭಿವೃದ್ಧಿಗೆ ಗುದ್ದಲಿಪೂಜೆ:ಭಾಗೀರಥಿ ಮುರುಳ್ಯ

by anamika

125 ಲಕ್ಷ ವೆಚ್ಚದಲ್ಲಿ ಕೆದ್ದೆಟ್ಟೊ ಕೆರೆಯ ಅಭಿವೃದ್ಧಿಗೆ ಗುದ್ದಲಿಪೂಜೆ:ಭಾಗೀರಥಿ ಮುರುಳ್ಯ

ಕಡಬ ತಾಲ್ಲೂಕಿನ ಪೆರಾಬೆ ಗ್ರಾಮದಲ್ಲಿರುವ ಕೆದ್ದೆಟ್ಟೊ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು. ಸುಮಾರು ₹125 ಲಕ್ಷ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಕೆರೆಯ ಪುನರುತ್ಥಾನ ಮತ್ತು ಸ್ಥಳೀಯ ಪರಿಸರದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಹಿರಿಯರಾದ ತಿಮ್ಮಪ್ಪ ಗೌಡ ಕುಂಡಡ್ಕ ಉಪಸ್ಥಿತರಿದ್ದರು.

ಇದೇ ವೇಳೆ ಸುಳ್ಯ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ, ಜಿಲ್ಲಾ ಬಿಜೆಪಿ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ್, ಪೆರಾಬೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸಂಧ್ಯಾ ಕೆ., ಕುಂತೂರು ಶಕ್ತಿ ಕೇಂದ್ರದ ಪ್ರಮುಖ್ ಸುಭೀಕ್ಷರತ್ನ, ಕುಂತೂರು 2ನೇ ವಾರ್ಡ್ ಬಿಜೆಪಿ ಅಧ್ಯಕ್ಷ ನಿತೀಶ್ ಏನಾಜೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಲ್ಲದೆ, ಪೆರಾಬೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಜು ಪಿ.ಜಿ., ಮೋಹಿನಿ, ಮಾಜಿ ಉಪಾಧ್ಯಕ್ಷರಾದ ವಸಂತ ಗೌಡ ಕೆದ್ದೋಟೆ, ಸುಕೇಶ್ ಕೆದ್ದೋಟೆ, ಸುರೇಶ್ ಕುಂಡಡ್ಕ, ಸೋಮಪ್ಪ ಗೌಡ, ಶೇಖರ್ ಕೆದ್ದೋಟೆ, ಗಂಗಾಧರ ಗೌಡ ಕೆದ್ದೋಟೆ, ರಾಮಣ್ಣ ಗೌಡ ಕೆದ್ದೋಟೆ, ಮೇದಪ್ಪ ಗೌಡ ಕೆದ್ದೋಟೆ, ಯೋಗೀಶ್ ಕೆದ್ದೋಟೆ, ಹರೀಶ್ ಕೆದ್ದೋಟೆ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಇಂಜಿನಿಯರ್ ರವಿಚಂದ್ರ ಹಾಗೂ ಗುತ್ತಿಗೆದಾರ ಗಣೇಶ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಈ ಯೋಜನೆ ಪೂರ್ಣಗೊಂಡ ನಂತರ, ಸ್ಥಳೀಯರಿಗೆ ನೀರಿನ ಸೌಲಭ್ಯ ಸುಧಾರಣೆಯ ಜೊತೆಗೆ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಆಶಿಸಲಾಗುತ್ತಿದೆ.

 

You may also like

Leave a Comment