Home HISTORYದುಗ್ಗಲಡ್ಕದಲ್ಲಿ ಗುಳಿಗ ದೈವದ ನೇಮೋತ್ಸವ ವಿಜೃಂಭಣೆ

ದುಗ್ಗಲಡ್ಕದಲ್ಲಿ ಗುಳಿಗ ದೈವದ ನೇಮೋತ್ಸವ ವಿಜೃಂಭಣೆ

by anamika

ದುಗ್ಗಲಡ್ಕದಲ್ಲಿ ಗುಳಿಗ ದೈವದ ನೇಮೋತ್ಸವ ವಿಜೃಂಭಣೆ

ದುಗ್ಗಲಡ್ಕ: ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ಆಡಳಿತಕ್ಕೊಳಪಟ್ಟ ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಒಳಗಿರುವ ಕಟ್ಟೆಯಲ್ಲಿ ಗುಳಿಗ ದೈವದ ನೇಮೋತ್ಸವವು ಭಕ್ತಿಭಾವದಿಂದ ನೆರವೇರಿತು.

ನೇಮೋತ್ಸವ ಕಾರ್ಯಕ್ರಮವು ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಆರಂಭಗೊಂಡು, ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ವಿವಿಧ ಊರುಗಳಿಂದ ಆಗಮಿಸಿದ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದ ಆನುವಂಶಿಕ ಮೊಕ್ತೇಸರರು, ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಮಹಿಳಾ ಮತ್ತು ಯುವ ಸೇವಾ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

You may also like

Leave a Comment