ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವಕ್ಕೆ ಪೂರ್ವಭಾವಿ ಸಭೆ
ಮಂಡೆಕೋಲು: ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಏಪ್ರಿಲ್ 23ರಿಂದ 27ರವರೆಗೆ ನಡೆಯಲಿದ್ದು, ಅದರ ಅಂಗವಾಗಿ ಪೂರ್ವಭಾವಿ ಸಭೆ ಮಾ.22ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಾತ್ರೋತ್ಸವದ ಸಿದ್ಧತೆಗಳು, ವ್ಯವಸ್ಥೆಗಳು ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಿವರಾಮ ಕೇನಾಜೆ, ಶುಭಕರ ಬೊಳುಗಲ್ಲು, ಸುಂದರ ನಾಯ್ಕ ಮೈಲೆಟ್ಟಿಪಾರೆ, ವಿಕಾಸ್ ಮೀನಗದ್ದೆ, ವೇದಾವತಿ ಕೇನಾಜೆ, ಶಿವಪ್ರಸಾದ್ ಭಟ್, ಸತೀಶ್ ಕಣೆಮರಡ್ಕ, ಪವಿತ್ರಪಾಣಿ ಕೇಶವಮೂರ್ತಿ ಹೆಬ್ಬಾರ್, ಡಿ.ಸಿ. ಬಾಲಚಂದ್ರ, ಶಿವಪ್ರಸಾದ್ ಯು.ಎಂ., ದಾಮೋದರ ಪಾತಿಕಲ್ಲು, ಸುರೇಶ್ ಕಣೆಮರಡ್ಕ, ಕುಸುಮಾಧರ ಮಾವಜಿ, ಲಕ್ಷ್ಮಣ ಯು.ಎಂ., ಜಾನಕಿ ಶ್ರೀಧರ ಕಣೆಮರಡ್ಕ, ಮೇದಪ್ಪ ಗೌಡ ಬೊಳುಗಲ್ಲು, ಅನಂತಕೃಷ್ಣ ಪಾಂಗಾಣ್ಣಾಯ, ಶೇಖರ ಕಣೆಮರಡ್ಕ, ಕೃಷ್ಣಪ್ಪ ಮಾಸ್ತರ್ ಕನ್ಯಾನ, ವಿಷ್ಣುಪ್ರಸಾದ್ ಮೀನಗದ್ದೆ, ದಾಮೋದರ ಮಿತ್ತಪೇರಾಲು, ಪುಷ್ಪಾವತಿ ದೇವರಗುಂಡ, ಚಂದ್ರಶೇಖರ ಅತ್ಯಾಡಿ ಮುರೂರು, ಶಶಿಧರ ಕಡಂಬಳಿತ್ತಾಯ, ಅಶೋಕ್ ಬೊಳುಗಲ್ಲು, ನಾರಾಯಣ ಗೌಡ ಮಾವಂಜಿ, ಎಲ್ಯಣ್ಣ ಗೌಡ ತೋಟಪ್ಪಾಡಿ, ಗಂಗಾಧರ ಮಣಿಯಾಣಿ ಮಾವಂಜಿ, ಶಿವಪ್ರಸಾದ್ ಕಣೆಮರಡ್ಕ, ಶಿವರಾಮ ಗೌಡ ಆಳಂಕಲ್ಯ, ಸುಜಾತ ಕಣೆಮರಡ್ಕ, ಪ್ರಕಾಶ್ ಕಣೆಮರಡ್ಕ, ದೀಕ್ಷಿತ್ ಮಾಗ, ಬಾಲಕೃಷ್ಣ ಮಾವಂಜಿ ಮೊದಲಾದವರು ಉಪಸ್ಥಿತರಿದ್ದರು.
ಜಾತ್ರೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.