Home Uncategorizedಯೂರಿಯಾ ಖರೀದಿಗೆ ರೈತ ಗುರುತಿನ ಚೀಟಿ ಕಡ್ಡಾಯ: ಕೃಷಿ ಇಲಾಖೆಯ ಹೊಸ ನಿಯಮ

ಯೂರಿಯಾ ಖರೀದಿಗೆ ರೈತ ಗುರುತಿನ ಚೀಟಿ ಕಡ್ಡಾಯ: ಕೃಷಿ ಇಲಾಖೆಯ ಹೊಸ ನಿಯಮ

by anamika

ಯೂರಿಯಾ ಖರೀದಿಗೆ ರೈತ ಗುರುತಿನ ಚೀಟಿ ಕಡ್ಡಾಯ: ಕೃಷಿ ಇಲಾಖೆಯ ಹೊಸ ನಿಯಮ

ಶಿವಮೊಗ್ಗ: ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಕಪ್ಪು ಮಾರುಕಟ್ಟೆ ನಿಯಂತ್ರಣಕ್ಕೆ ರಾಜ್ಯ ಕೃಷಿ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಯೂರಿಯಾ ಖರೀದಿಸಲು ರೈತರಿಗೆ ‘ರೈತ ಗುರುತಿನ ಚೀಟಿ’ (FID) ಕಡ್ಡಾಯಗೊಳಿಸಲಾಗಿದ್ದು, ಈ ನಿಯಮವನ್ನು 2026-27ರ ಖಾರಿಫ್ ಋತುವಿನಿಂದ ಜಾರಿಗೆ ತರಲಾಗುತ್ತದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ, ಕೆ-ಕಿಸಾನ್ ಸಾಫ್ಟ್‌ವೇರ್ ಮೂಲಕ ರೈತರ ಭೂಮಿ ಹಾಗೂ ಬೆಳೆ ವಿವರಗಳನ್ನು ಆಧರಿಸಿ ಅಗತ್ಯವಿರುವ ಪ್ರಮಾಣದ ರಸಗೊಬ್ಬರವನ್ನು ಮಾತ್ರ ವಿತರಿಸಲಾಗುತ್ತದೆ. ಇದರಿಂದ ಗೊಬ್ಬರದ ದುರುಪಯೋಗ ತಡೆಯುವ ಜೊತೆಗೆ ನಿಜವಾದ ರೈತರಿಗೆ ಸಮರ್ಪಕ ಪೂರೈಕೆ ಖಚಿತಪಡಿಸುವುದು ಉದ್ದೇಶವಾಗಿದೆ.

ರೈತ ಗುರುತಿನ ಚೀಟಿ ಹೊಂದಿರದವರು ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ದಾಖಲೆಗಳೊಂದಿಗೆ ತಕ್ಷಣ ನೋಂದಾಯಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

You may also like

Leave a Comment