Home Uncategorizedದ್ವಿತೀಯ ಪಿ.ಯು ಫಲಿತಾಂಶ 2026: ವಿಜ್ಞಾನ ವಿಭಾಗದಲ್ಲಿ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ಪ್ರಥಮ

ದ್ವಿತೀಯ ಪಿ.ಯು ಫಲಿತಾಂಶ 2026: ವಿಜ್ಞಾನ ವಿಭಾಗದಲ್ಲಿ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ಪ್ರಥಮ

by anamika

ದ್ವಿತೀಯ ಪಿ.ಯು ಫಲಿತಾಂಶ 2026: ವಿಜ್ಞಾನ ವಿಭಾಗದಲ್ಲಿ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ಪ್ರಥಮ

ಪುತ್ತೂರು: 2026ರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿರಾಮ್ ವಿ. ಭಟ್ ಅವರು ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನಸೆಳೆದಿದ್ದಾರೆ.

ಅಭಿರಾಮ್ ಅವರು ಒಟ್ಟು 600ರಲ್ಲಿ 598 ಅಂಕಗಳನ್ನು ಪಡೆದು ಅಸಾಧಾರಣ ಸಾಧನೆ ಮೆರೆದಿದ್ದಾರೆ. ಅವರ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಯ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಬೆಂಬಲವೇ ಈ ಯಶಸ್ಸಿನ ಹಿಂದೆ ಪ್ರಮುಖ ಕಾರಣವಾಗಿದ್ದು, ಅವರ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

You may also like

Leave a Comment