ಮಯ್ಯಾಳ ಸಾಲೆಯತ್ತಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 46ನೇ ವರ್ಷದ ಒತ್ತೆಕೋಲ ಮಹೋತ್ಸವ
ಈಶ್ವರಮಂಗಲ, ಏಪ್ರಿಲ್ 15: ಇತಿಹಾಸ ಪ್ರಸಿದ್ಧ ಮಯ್ಯಾಲ ಶಾಲೆಯತ್ತಡ್ಕ ವಿಷ್ಣುನಗರದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 46ನೇ ವರ್ಷದ ಭವ್ಯ ‘ಒತ್ತೆಕೋಲ’ ಮಹೋತ್ಸವವು ಏಪ್ರಿಲ್ 16 ಮತ್ತು 17ರಂದು ಶ್ರದ್ಧಾಭಕ್ತಿಗಳೊಂದಿಗೆ ನಡೆಯಲಿದೆ.
ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ವೈಭವವನ್ನು ಪ್ರತಿಬಿಂಬಿಸುವ ಈ ಮಹೋತ್ಸವವು ಎರಡು ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು, ಭಕ್ತಿಪರ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ಜರುಗಲಿದ್ದು, ಸಮಿತಿಯಿಂದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
ಕಾರ್ಯಕ್ರಮದ ವೇಳಾಪಟ್ಟಿ
ಏಪ್ರಿಲ್ 16, ಗುರುವಾರ:
ಸಂಜೆ 7:00ಕ್ಕೆ ಭಜನಾ ಕಾರ್ಯಕ್ರಮ
ಸಂಜೆ 7:30ಕ್ಕೆ ಭಂಡಾರ ಆಗಮನ
ರಾತ್ರಿ 8:30ಕ್ಕೆ ಮಲೇರಿಗೆ ಅಗ್ನಿ ಸ್ಪರ್ಶ (ಒತ್ತೆಕೋಲದ ಪ್ರಮುಖ ವಿಧಿ)
ರಾತ್ರಿ 9:00ರಿಂದ ಅನ್ನಸಂತರ್ಪಣೆ
ರಾತ್ರಿ 9:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
ರಾತ್ರಿ 11:00ಕ್ಕೆ ಶ್ರೀ ದೈವದ ಕುಳಿಚಾಟು
ರಾತ್ರಿ 12:30ರಿಂದ ಯಕ್ಷಗಾನ ಬಯಲಾಟ
ಕುಳಿಚಾಟು ಬಳಿಕ ನಡೆಯುವ ಯಕ್ಷಗಾನ ಪ್ರದರ್ಶನದಲ್ಲಿ “ಶ್ರೀ ಕೃಷ್ಣ ಪಾರಿಜಾತ ಮತ್ತು ನರಕಾಸುರ ಮೋಕ್ಷ” ಪ್ರಸಂಗವನ್ನು ಈಶ್ವರಮಂಗಲದ ಶ್ರೀ ಶಿವ ಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ, ಬೆಳ್ಳಿಚಡವು ತಂಡವು ನಿರ್ವಹಿಸಲಿದೆ.
ಏಪ್ರಿಲ್ 17, ಶುಕ್ರವಾರ: ಮರುದಿನ ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಪ್ರಸಾದ ವಿತರಣೆಯೊಂದಿಗೆ ಮಹೋತ್ಸವವು ಸಂಪನ್ನಗೊಳ್ಳಲಿದೆ.
ಈ ಭಕ್ತಿಪೂರ್ವಕ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೈವದ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.