19
🚨 ಮಂಗಳೂರು ರೈಲು ವಿಳಂಬ: ಪ್ರಯಾಣಿಕರಿಗೆ ತೊಂದರೆ 🚨
ಮಂಗಳೂರು, ಏಪ್ರಿಲ್ 22: ಸುಬ್ರಹ್ಮಣ್ಯ ರಸ್ತೆ–ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು (ಸಂಖ್ಯೆ 56630) ಇಂದು ಸುಮಾರು 1 ಗಂಟೆ 50 ನಿಮಿಷ ವಿಳಂಬವಾಗಿ ಸಂಚರಿಸುತ್ತಿದೆ.
ಪಡೀಲ್–ಸುಬ್ರಹ್ಮಣ್ಯ ರಸ್ತೆ ಮಾರ್ಗದಲ್ಲಿ BCM (ಬಾಲಸ್ಟ್ ಕ್ಲೀನಿಂಗ್ ಮೆಷಿನ್) ಕಾಮಗಾರಿ ನಡೆಯುತ್ತಿರುವುದರಿಂದ ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದೀಗ ರೈಲು ಬಂಟ್ವಾಳ (BNTL) ನಿಲ್ದಾಣವನ್ನು ಸಂಜೆ 5:13ಕ್ಕೆ ತಲುಪಿದ್ದು, ಸುಮಾರು 1 ಗಂಟೆ 52 ನಿಮಿಷ ವಿಳಂಬವಾಗಿದೆ. ಮಂಗಳೂರು ಸೆಂಟ್ರಲ್‌ಗೆ ಸಂಜೆ 6:05ರ ಸುಮಾರಿಗೆ ತಲುಪುವ ನಿರೀಕ್ಷೆ ಇದೆ.
ಈ ರೈಲು ಇನ್ನೂ ಮಂಗಳೂರು ಸೆಂಟ್ರಲ್‌ಗೆ ತಲುಪದ ಹಿನ್ನೆಲೆ, ಇದರ ಜೋಡಿ ರೈಲು 56627 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ಕೂಡ ಇಂದು ವಿಳಂಬವಾಗಿ ಸಂಚರಿಸುವ ಸಾಧ್ಯತೆ ಇದೆ.
ಪ್ರಯಾಣಿಕರು ರೈಲು ವೇಳಾಪಟ್ಟಿಯಲ್ಲಿ ಸಂಭವಿಸಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಮಾಡುವಂತೆ ಸೂಚಿಸಲಾಗಿದೆ.