Home Uncategorizedವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?*ಕಠಿಣ ಕ್ರಮ ಎಂದ ಗೃಹಸಚಿವ ಡಾ: ಪರಮೇಶ್ವರ್

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?*ಕಠಿಣ ಕ್ರಮ ಎಂದ ಗೃಹಸಚಿವ ಡಾ: ಪರಮೇಶ್ವರ್

by anamika

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?*

ಕಠಿಣ ಕ್ರಮ ಎಂದ ಗೃಹಸಚಿವ ಡಾ: ಪರಮೇಶ್ವರ್

ಕುಟ್ಟ ಗ್ರಾಮದ ಹೋಂಸ್ಟೇನಲ್ಲಿ ಅಮೆರಿಕ ಮೂಲದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ವೈಫೈ ಕಡಿತಗೊಳಿಸಿ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗಿತ್ತು ಎನ್ನಲಾಗಿದೆ. ಸಂತ್ರಸ್ತೆ ಅಮೆರಿಕ ರಾಯಭಾರ ಕಚೇರಿ ಮೂಲಕ ಮಾಹಿತಿ ನೀಡಿದ ಬಳಿಕ ಆರೋಪಿಗಳ ಬಂಧನವಾಗಿದೆ. ಗೃಹ ಸಚಿವರು ಕಠಿಣ ಕ್ರಮದ ಭರವಸೆ ನೀಡಿದ್ದು, ಈ ಘಟನೆ ರಾಜ್ಯದ ಹೋಂಸ್ಟೇ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೊಡಗು ಜಿಲ್ಲೆಯ ಕುಟ್ಟ ಗ್ರಾಮದಲ್ಲಿರುವ ಹೋಂಸ್ಟೇಯಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ರಿವೀಲ್​​ ಆಗಿದೆ. ಮಹಿಳೆಯ ಮೇಲೆ ಝಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಅತ್ಯಾಚಾರ ನಡೆಸಿದ್ದರೂ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗಿತ್ತು. ಹೀಗಾಗಿ ಬರೋಬ್ಬರಿ ಮೂರು ದಿನಗಳ ಕಾಲ ವೈಫೈ ಸಂಪರ್ಕವನ್ನು ಕಡಿತಗೊಳಿಸಿ ಸಂತ್ರಸ್ತೆಗೆ ಹೊರಗಿನ ಸಂಪರ್ಕ ಸಿಗದಂತೆ ನೋಡಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.

ಅಂತಿಮವಾಗಿ ವೈಫೈ ಸಂಪರ್ಕ ದೊರಕಿದ ಬಳಿಕ, ಮೈಸೂರಿಗೆ ತೆರಳುವ ನೆಪದಲ್ಲಿ ಸಂತ್ರಸ್ತೆ ಹೋಂಸ್ಟೇಯಿಂದ ಹೊರಗೆ ಬಂದಿದ್ದಾಳೆ. ಆ ಬಳಿಕವೇ ಘಟನೆ ಕುರಿತು ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾಳೆ. ಅದನ್ನು ಆಧರಿಸಿ ಅಮೆರಿಕ ರಾಯಭಾರ ಅಧಿಕಾರಿಗಳು ಮೈಸೂರು ಪೊಲೀಸರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದು, ಪ್ರಕರಣ ಅಧಿಕೃತವಾಗಿ ದಾಖಲಾಗಿತ್ತು. ಕುಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್​​ ಬೆನ್ನಲ್ಲೇ, ಹೋಂಸ್ಟೇಯ ಕೆಲಸಗಾರ ವೃಜೇಶ್ ಮತ್ತು ಮಾಲೀಕ ವಿಶಾಲ್​​ನ ಬಂಧಿಸಿದ್ದಾರೆ. ಆರೋಪಿಗಳನ್ನು ಮೇ 3ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

*ಕಠಿಣ ಕ್ರಮ ಎಂದ ಗೃಹಸಚಿವರು*
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್​​, ಈಗಾಗಲೇ ನಾವು ಎಸ್​ಒಪಿಯನ್ನು ನೀಡಿದ್ದೇವೆ. ಹೋಂಸ್ಟೇ ನಡೆಸುವವರು ಆ ಪ್ರಕಾರ ನಡೆಸುಕೊಂಡು ಹೋಗಬೇಕು. ಏನು ಕ್ರಮ ವಹಿಸಬೇಕು ಎಲ್ಲವನ್ನೂ ಎಸ್​ಒಪಿಯಲ್ಲಿ ಕೊಟ್ಟಿರುತ್ತೇವೆ. ಅದನ್ನೂ ಮೀರಿ ಈ ಘಟನೆ ಆದಾಗ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ವಿದೇಶಿಗರ ಮೇಲೆ ಈ ರೀತಿ ನಡೆದ್ರೆ ನಮ್ಮ ಸಮಾಜ, ನಮ್ಮ ದೇಶದ ಬಗ್ಗೆ ಏನು ಸಂದೇಶ ಹೋಗುತ್ತದೆ? ಹೀಗಾಗಿ ನಾವು ಕಠಿಣ ಕ್ರಮ ತೆಗೆದುಕೊಳ್ತೇವೆ. ಘಟನೆ ನಂತರ ಮುಚ್ಚಾಕುವ ಪ್ರಯತ್ನ ಮಾಡಿದ್ದಾರೆ ಅನ್ನಿಸುತ್ತಿದ್ದು, ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

You may also like

Leave a Comment