Home Uncategorizedಆಯುರ್ವೇದ ವೈದ್ಯನ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು : ಸ್ನೇಹಿತನಿಂದಲೇ ನಡೆಯಿತು ಕೊಲೆ..!?

ಆಯುರ್ವೇದ ವೈದ್ಯನ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು : ಸ್ನೇಹಿತನಿಂದಲೇ ನಡೆಯಿತು ಕೊಲೆ..!?

by anamika

ಆಯುರ್ವೇದ ವೈದ್ಯನ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು : ಸ್ನೇಹಿತನಿಂದಲೇ ನಡೆಯಿತು ಕೊಲೆ..!?

ಶಿರಸಿ: ನಗರದ ಆಯುರ್ವೇದ ವೈದ್ಯನ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಸಿ ಕೆಎಚ್‌ಬಿ ಕಾಲೋನಿಯ ಹೊಸ ಬಡಾವಣೆಯಲ್ಲಿ ವಾಸವಿದ್ದ ಡಾ. ರಮೇಶ್ ಎಫ್. ಕಲ್ಗುಟ್ಕರ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು.

2ನೇ ಮದುವೆಗೆ ರೆಡಿಯಾಗಿದ್ದ ಶಿರಸಿ ವೈದ್ಯನ ಹತ್ಯೆಗೆ ಕಾರಣ ಬಹಿರಂಗ; ಸ್ನೇಹಿತನೇ ಕೊಲೆಗಾರ!

ವೈದ್ಯ ರಮೇಶ ಕಲ್ಗುಟ್ಕರ್ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿ ಬಂಧನ, ಚಿನ್ನಾಭರಣ, ನಗದು ವಶ.!

ಶಿರಸಿ: ನಗರವನ್ನೇ ಬೆಚ್ಚಿಬೀಳಿಸಿದ್ದ ಆಯುರ್ವೇದ ವೈದ್ಯ ರಮೇಶ ಕಲ್ಗುಟ್ಕರ್ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮಂಜುನಾಥ ಪಿ.ಎಲ್ (70), ಮೂಲತಃ ಶಿವಮೊಗ್ಗ ಜಿಲ್ಲೆಯ ಪಡುಬೈಲ್ ಮಳಲೂರು ನಿವಾಸಿ, ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿಯಿಂದ ಸುಮಾರು ₹15 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ₹50,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಪಿ ದೀಪನ್ ಅವರ ನೇತೃತ್ವದಲ್ಲಿ, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಡಿವೈಎಸ್ಪಿ ಪಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ಸಿಪಿಐ ಶಶಿಕಾಂತ್ ವರ್ಮ, ಪಿಐ ರಮೇಶ್ ಹೂಗಾರ್ ಹಾಗೂ ಹೊಸ ಮಾರುಕಟ್ಟೆ ಠಾಣೆಯ ಪಿಎಸ್‌ಐ ಬಸವರಾಜ್ ಕನಶೆಟ್ಟಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಇಲಾಖೆಯ ದಕ್ಷ ಹಾಗೂ ತ್ವರಿತ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

#Sirasi
#uttarakannada

You may also like

Leave a Comment