Home UncategorizedSSLC ರಿಸಲ್ಟ್ : ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಈ ಸಲನೂ ಹೆಣ್ಮಕ್ಳುದ್ದೇ ಹವಾ! ಫೇಲ್​​ ಆದವರಿಗೆ ಮೂರನೇ ಬಾರಿ ಪರೀಕ್ಷೆ ಇರಲ್ಲ

SSLC ರಿಸಲ್ಟ್ : ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಈ ಸಲನೂ ಹೆಣ್ಮಕ್ಳುದ್ದೇ ಹವಾ! ಫೇಲ್​​ ಆದವರಿಗೆ ಮೂರನೇ ಬಾರಿ ಪರೀಕ್ಷೆ ಇರಲ್ಲ

by anamika

SSLC ರಿಸಲ್ಟ್ : ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​?

ಈ ಸಲನೂ ಹೆಣ್ಮಕ್ಳುದ್ದೇ ಹವಾ!

ಫೇಲ್​​ ಆದವರಿಗೆ ಮೂರನೇ ಬಾರಿ ಪರೀಕ್ಷೆ ಇರಲ್ಲ

 

2025-26ನೇ ಸಾಲಿನ ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಸುದ್ದಿಗೋಷ್ಠಿ ನಡೆಸಿ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಈ ಬಾರಿ ಫಲಿತಾಂಶದಲ್ಲಿ ಯಾವ ಜಿಲ್ಲೆ ಫಸ್ಟ್, ಯಾವ ಜಿಲ್ಲೆ ಲಾಸ್ಟ್? ಎನ್ನುವ ಕುತೂಹಲಕ್ಕೂ ಅಂತಿಮವಾಗಿ ತೆರೆಬಿದ್ದಿದ್ದು, ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲಾವಾರು ಸ್ಥಾನದ ಮಾಹಿತಿ ಇಲ್ಲಿದೆ.

2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಏಪ್ರಿಲ್‌ 23ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಿಸಲ್ಟ್​​ ಸಂಬಂಧಿತ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1 ಮಂದಿ ಪಾಸ್​​ ಆಗಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು.

 

ದಕ್ಷಿಣ ಕನ್ನಡ ಫಸ್ಟ್​​, ಕಲಬುರಗಿ ಲಾಸ್ಟ್​​

ಈ ಬಾರಿಯ ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

 

*ಜಿಲ್ಲಾವಾರು ಫಲಿತಾಂಶ:*

1) ದಕ್ಷಿಣ ಕನ್ನಡ ಜಿಲ್ಲೆ- 98.40%

2) ಉಡುಪಿ – 98.18%

3) ಉತ್ತರ ಕನ್ನಡ- 98.09%

4) ಹಾಸನ- 97.51%

5) ಮಂಡ್ಯ- 97.45%

6) ಶಿರಸಿ- 97.21%

7) ಹಾವೇರಿ- 96.87%

8) ಕೊಡಗು- 96.70%

9) ಶಿವಮೊಗ್ಗ- 96.56%

10) ವಿಜಯನಗರ- 96.39%

11) ಬೆಂಗಳೂರು ಗ್ರಾಮಾಂತರ – 95.84%

12) ಧಾರವಾಡ – 95.59%

13) ಕೋಲಾರ- 95.50%

14) ಬಾಗಲಕೋಟೆ- 95.42%

15) ಬೆಂಗಳೂರು ಉತ್ತರ- 95.34%

16) ಗದಗ- 95.24%

17) ಚಿಕ್ಕಮಗಳೂರು- 94.99%

18) ಬೆಳಗಾವಿ – 94.75%

19) ದಾವಣಗೆರೆ- 94.64%

20) ಮೈಸೂರು- 94.50%

21) ರಾಯಚೂರು- 94.41%

22) ವಿಜಯಪುರ- 94.17%

23) ಚಿಕ್ಕೋಡಿ- 94.09%

24) ಬಳ್ಳಾರಿ- 93.36%

25) ಕೊಪ್ಪಳ- 93.10%

26) ರಾಮನಗರ- 92.83%

27) ಚಿತ್ರದುರ್ಗ- 92.25%

28) ಬೀದರ್- 92.18%

29) ತುಮಕೂರು- 92.04%

30) ಚಾಮರಾಜನಗರ- 91.89%

31) ಯಾದಗಿರಿ- 91.89%

32) ಬೆಂಗಳೂರು ದಕ್ಷಿಣ- 91.65%

33) ಚಿಕ್ಕಬಳ್ಳಾಪುರ- 90.88%

34) ಮಧುಗಿರಿ- 90.26%

35) ಕಲಬುರಗಿ-85.06%

 

ಈ ಬಾರಿಯೂ ಬಾಲಕಿಯರೇ ಮೇಲುಗೈ

SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಶೇ.96.18ರಷ್ಟು ಬಾಲಕಿಯರು, ಶೇ.91.94ರಷ್ಟು ಬಾಲಕರು ಪಾಸ್ ಆಗಿದ್ದಾರೆ. 3,92,922 ಬಾಲಕಿಯರ ಪೈಕಿ 3,77,922 ಬಾಲಕಿಯರು ತೇರ್ಗಡೆ ಹೊಂದಿದ್ದರೆ, 3,77,287 ಬಾಲಕರ ಪೈಕಿ 3,46,872 ಬಾಲಕರು ಉತ್ತೀರ್ಣಗೊಂಡಿದ್ದಾರೆ.

SSLC ಫೇಲ್​​ ಆದವರಿಗೆ ಮೂರನೇ ಬಾರಿ ಪರೀಕ್ಷೆ ಇರಲ್ಲ

ಈ ಬಾರಿಯ ಫಲಿತಾಂಶವು ದಾಖಲೆ ಮಟ್ಟದ ಪ್ರಗತಿ ಕಂಡಿರುವುದರಿಂದ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೂರನೇ ಬಾರಿಯ ಪರೀಕ್ಷೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಎರಡನೇ ಪರೀಕ್ಷೆಯು ಮೇ 18 ರಿಂದ ಮೇ 25ರವರೆಗೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಪಾಸ್ ಆಗಲು ಪ್ರಯತ್ನಿಸಬಹುದು. ಇದಕ್ಕಾಗಿ ಶಿಕ್ಷಕರು ಮತ್ತು ಇಲಾಖೆಯು ಸೂಕ್ತ ತರಬೇತಿ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

You may also like

Leave a Comment