54
ಡಿಜಿಟಲ್ ಯುಗಕ್ಕೆ ಶಿಕ್ಷಣ: ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’ ವ್ಯವಸ್ಥೆ ರೂಪಣೆ
ಬೆಂಗಳೂರು: ಸಾಂಪ್ರದಾಯಿಕ ಕಾಗದದ ಅಂಕಪಟ್ಟಿಗಳಿಗೆ ವಿದಾಯ ಹೇಳುವ ದಿಕ್ಕಿನಲ್ಲಿ ಶಿಕ್ಷಣ ಕ್ಷೇತ್ರ ಮಹತ್ವದ ಹೆಜ್ಜೆ ಇಟ್ಟಿದ್ದು, ಎಲ್‌ಕೆಜಿ ರಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’ ನೀಡುವ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಈ ಆಧುನಿಕ ವ್ಯವಸ್ಥೆಯ ಮೂಲಕ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಮೊಬೈಲ್ ಅಥವಾ ಇಮೇಲ್ ಮೂಲಕವೇ ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಪರೀಕ್ಷಾ ಅಂಕಗಳ ಜೊತೆಗೆ ಶಿಕ್ಷಕರ ಅಭಿಪ್ರಾಯಗಳು ಹಾಗೂ ಮಗುವಿನ ಸರ್ವತೋಮುಖ ಬೆಳವಣಿಗೆಯ ವಿವರಗಳು ಒಂದೇ ವೇದಿಕೆಯಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ.
ಈ ಕ್ರಮವು ಶಿಕ್ಷಣದಲ್ಲಿ ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ ಪೋಷಕರಿಗೆ ಮಕ್ಕಳ ಪ್ರಗತಿಯನ್ನು ನಿರಂತರವಾಗಿ ಗಮನಿಸಲು ಸಹಾಯಕವಾಗಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.